ರಾಯ್‍ಪುರ: ಪೂರ್ವ ಕರಾವಳಿ ರೈಲ್ವೇ ವಿಭಾಗ 2 ಕಿ.ಮೀ. ಉದ್ದದ ಗೂಡ್ಸ್ ರೈಲು ತನ್ನ ಮೊದಲ ಪ್ರಾಯೋಗಿಕ ಸಂಚಾರದಲ್ಲಿ ಯಶಸ್ಸು ಕಂಡಿದೆ. 2 ಕಿ.ಮೀ. ಉದ್ದದ ರೈಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೂರ್ವ ಕರಾವಳಿ ರೈಲ್ವೇ ಪ್ರಾಯೋಗಿಕ ಪರೀಕ್ಷೆ ಬಹುತೇಕ ಯಶಸ್ವಿಯಾಗಿದ್ದು, ಮಾನವ ಸಂಪನ್ಮೂಲ ಮತ್ತು ಸಮಯ ಉಳಿತಾಯವಾಗಲಿದೆ.
ಈ ಅನಾಕೊಂಡ ರೈಲು ಒಟ್ಟು 147 ವ್ಯಾಗನ್ ಗಳು, ಮೂರು ಬ್ರೇಕ್ ಸೇರಿದಂತೆ ನಾಲ್ಕು ಎಂಜಿನ್ ಒಳಗೊಂಡಿರಲಿದೆ. ಗೋದ್ಭಾಗ ಮತ್ತು ಬಲಂಗಿರ್ ನಿಲ್ದಾಣಗಳ ಮಧ್ಯೆ ಈ ರೈಲು ಸಂಚರಿಸುವ ಸಾಧ್ಯತೆಗಳಿವೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಅನಾಕೊಂಡ ರೈಲಿನ ಮೊದಲ ರೇಕ್ 45 ವ್ಯಾಗನ್, ಎರಡು ಹಾಗೂ ಮೂರನೇ ರೇಕ್ ತಲಾ 51 ವ್ಯಾಗನ್ ಗಳನ್ನು ಹೊಂದಿತ್ತು. 147 ವ್ಯಾಗನ್ ಹೊತ್ತ ರೈಲು ವಿಶಾಖಪಟ್ಟಣದತ್ತ ಪ್ರಯಾಣ ಬೆಳೆಸಿತ್ತು.
Advertisement
Advertisement
ಎಲ್ಲ ಪ್ರಾಯೋಗಿಕ ಪರೀಕ್ಷೆಯ ಯಶಸ್ಸಿನ ಬಳಿಕ ಎರಡು ತಿಂಗಳ ಬಳಿಕ ಅಧಿಕೃತವಾಗಿ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ 177 ವ್ಯಾಗನ್ ಗಳನ್ನು ಮೂರು ಲೋಕೋಮೋಟಿವ್ (ಎಂಜಿನ್) ಎಳೆಯಲಿವೆ. ಇಂಧನವಾಗಿ ಡಿಸೇಲ್ ಬಳಸಲಾಗುತ್ತದೆ. ಮೂರು ಲೋಕೋಮೋಟಿವ್ ಗಳನ್ನು ಓರ್ವ ಲೋಕೋಪೈಲಟ್ ಮತ್ತು ಸಹಾಯಕ ನಡೆಸಲಿದ್ದಾರೆ.
Advertisement
177 ವ್ಯಾಗನ್ ಹೊಂದಿರುವ ರೈಲಿನ ಉದ್ದವೇ ಬರೋಬ್ಬರಿ 2 ಕಿ.ಮೀ. ಇರಲಿದೆ. ಭಿಲೈ ನಿಲ್ದಾಣದಿಂದ ಸಂಜೆ 5.30ಕ್ಕೆ ಪ್ರಯಾಣ ಆರಂಭಿಸಿದ ರೈಲು ರಾತ್ರಿ 11 ಗಂಟೆಗೆ ಕೊರ್ಬಾ ನಿಲ್ದಾಣ ತಲುಪಿದೆ. ರೆನಡೆಲ್ಯಾಟ್ ಸಿಸ್ಟಮ್ ತಂತ್ರಜ್ಞಾನ ಆಧಾರದಲ್ಲಿ ಆನಾಕೊಂಡ ರೈಲಿನ ಎಲ್ಲ ಎಂಜಿನ್ ಗಳು ಒಂದೇ ವೇಗದಲ್ಲಿ ಚಲಿಸುತ್ತವೆ.
Advertisement
"Technology breaking new grounds – SECR ran Nearly 2 km long Long haul train – named – Anaconda Orignating from Raipur division, feeding NBOX empty rakes for coal loading at Korba. @RailMinIndia @GMSECR @drm_raipur @DRMBilaspur @drmngpsecr pic.twitter.com/yMxZiqoSpI
— South East Central Railway (@secrail) May 27, 2019