ಹಾವೇರಿ: ಬೈಕ್‍ಗೆ ಟ್ರಕ್ ಡಿಕ್ಕಿಯಾಗಿ ಸವಾರರ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ರಾಣೇಬೆನ್ನೂರಿನ ಛತ್ರ ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಎದುರಿನ ವಾಹನವನ್ನುಓವರ್‌ಟೇಕ್ ಮಾಡುವ ವೇಳೆ ಹಿಂದಿನಿಂದ ಟ್ರಕ್ ಡಿಕ್ಕಿಯಾಗಿದೆ.
ಮೃತರನ್ನು ಶಿಗ್ಗಾಂವಿಯ ಚಾಕಾಪೂರ ಗ್ರಾಮದ ನಿಂಗಪ್ಪ (40) ಶರೀಫ್ (45) ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಬ್ಯಾಡಗಿ (Byadagi) ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲು, ಚೂರಿ ಹಿಡಿದು ನಡುರಸ್ತೆಯಲ್ಲಿ ದಾಂಧಲೆ – ಸಿನಿಮೀಯ ಶೈಲಿಯಲ್ಲಿ ಲಾಕ್ ಮಾಡಿದ ಪೊಲೀಸರು
ಗ್ರಾಮದ ಬಳಿ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಅನೇಕ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಇದುವರೆಗೂ ಅದೇ ಸ್ಥಳದಲ್ಲಿ ಅಪಘಾತಕ್ಕೆ 9 ಜನ ಬಲಿಯಾಗಿದ್ದಾರೆ. ಅಪಘಾತ ಸಂಬಂಧ 11 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ (National Highway Authority Of India) ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ: 72ರ ಅಜ್ಜನ ವಿರುದ್ಧ 63ರ ಅಜ್ಜಿ ದೂರು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]