ಒಟ್ಟಾವಾ: ದೋಣಿ ಅಪಘಾತದಲ್ಲಿ ಎರ್ನಾಕುಲಂ ಜಿಲ್ಲೆಯ ಇಬ್ಬರು ಕೇರಳಿಗರು ಮೃತಪಟ್ಟಿದ್ದು, ಓರ್ವ ನಾಪತ್ತೆ ಆಗಿರುವ ಘಟನೆ ಕೆನಡಾದ ಕ್ಯಾಲ್ಗರಿಯ ಕ್ಯಾನ್‍ಮೋರ್‍ನಲ್ಲಿ ನಡೆದಿದೆ.
ಕ್ಯಾನ್‍ಮೋರ್‌ನ ಸ್ಪ್ರೇಲೇಕ್ ಜಲಾಶಯದಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಜಿಯೋ ಪೈಲಿ(33), ಕೆವಿನ್ ವರ್ಗೀಸ್ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೋರ್ವ ಅತಿರಪಿಲ್ಲಿ ಮೂಲದ ಲಿಯೋ ಮ್ಯಾಥ್ಯೂ (41) ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ತ್ರಿಶೂರ್ ಮೂಲದ ಜಿಜೋ ಜೋಸೆಫ್ ಅವರನ್ನು ರಕ್ಷಿಸಲಾಗಿದ್ದು, ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪ್ರಕರಣ- ಪ್ರಮೋದ್ ಪಿಎ ಸೇರಿದಂತೆ ನಾಲ್ವರ ಬಂಧನ
ದೋಣಿಯಲ್ಲಿ ನಾಲ್ವರು ಮೀನು ಹಿಡಿಯುವುದಕ್ಕೆ ಹೋಗಿದ್ದರು ತೆರಳಿದ್ದರು. ದೋಣಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ಆಗ ಜಲಾಶಯದ ನೀರಿನ ಸೆಳೆತಕ್ಕೆ ಸಿಲು ಇಬ್ಬರು ನೀರಿನ ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಮತ್ತೊಬ್ಬನನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ನಿರ್ಧಾರ