ನವದೆಹಲಿ: ನ್ಯಾ. ಅರವಿಂದ್ ಕುಮಾರ್ (Justice Aravind Kumar), ನ್ಯಾ. ರಾಜೇಶ್ ಬಿಂದಾಲ್ (Justice Rajesh Bindal) ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಇಬ್ಬರು ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಇಬ್ಬರು ನ್ಯಾಯಾಧೀಶರ ನೇಮಕದಿಂದ ಸದ್ಯ ಸುಪ್ರೀಂಕೋರ್ಟ್ ನಲ್ಲಿ ಪೂರ್ಣ ಪ್ರಮಾಣ (34) ನ್ಯಾಯಾಧೀಶರ ಹುದ್ದೆ ಭರ್ತಿಯಾಗಿದೆ.
Advertisement
ಹಾಸನ ಮೂಲದ ನ್ಯಾ.ಅರವಿಂದ್ ಕುಮಾರ್ ಅವರನ್ನು ಜೂನ್ 2009 ರಲ್ಲಿ ಕರ್ನಾಟಕ ಹೈಕೋರ್ಟ್ (Karnataka Highcourt) ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು, ಡಿಸೆಂಬರ್ 2012 ರಲ್ಲಿ ಖಾಯಂ ನ್ಯಾಯಾಧೀಶರಾಗಿ ದೃಢೀಕರಿಸಲಾಯಿತು. ಅಕ್ಟೋಬರ್ 2021 ರಲ್ಲಿ ಗುಜರಾತ್ನ ಗುಜರಾತ್ ಹೈಕೋರ್ಟ್ )Gujrath Highcourt) ನ ಮುಖ್ಯ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲ್ಪಟ್ಟರು.
Advertisement
Advertisement
ನ್ಯಾ.ರಾಜೇಶ್ ಬಿಂದಾಲ್ ಅವರನ್ನು ಮಾರ್ಚ್ 2006 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಿಸಲಾಯಿತು ಬಳಿಕ ಅಕ್ಟೋಬರ್ 2021 ರಲ್ಲಿ ಅಲಹಾಬಾದ್ ಹೈಕೋರ್ಟ್ (Alahabad Highcourt) ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಿರಿತನದ ಪ್ರಕಾರ, ನ್ಯಾಯಮೂರ್ತಿ ಬಿಂದಾಲ್ ಅವರು ಹೈಕೋರ್ಟ್ನಲ್ಲಿ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದರು. ಇದನ್ನೂ ಓದಿ: ʼಸುಪ್ರೀಂʼ ನಿವೃತ್ತ ನ್ಯಾಯಾಧೀಶ ಕನ್ನಡಿಗ ಅಬ್ದುಲ್ ನಜೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕ
Advertisement
ನ್ಯಾ.ರಾಜೇಶ್ ಬಿಂದಾಲ್ ಹೆಸರು ಶಿಫಾರಸು ಮಾಡುವಾಗ ಅತಿದೊಡ್ಡ ಹೈಕೋರ್ಟ್ಗಳಲ್ಲಿ ಒಂದಾಗಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ (Supreme Court) ನಲ್ಲಿ ಸಮರ್ಪಕವಾಗಿ ಪ್ರಾತಿನಿಧ್ಯವಿಲ್ಲ ಎಂದು ಕೊಲಿಜಿಯಂ ಗಮನಿಸಿತ್ತು. ಅಖಿಲ ಭಾರತ ಹಿರಿತನದ ಪ್ರಕಾರ, ನ್ಯಾ. ಅರವಿಂದ ಕುಮಾರ್ ಪ್ರಸ್ತುತ ಹೈಕೋರ್ಟ್ ನ್ಯಾಯಾಧೀಶರಲ್ಲಿ 26 ನೇ ಹಿರಿಯ-ಅತ್ಯಂತ ನ್ಯಾಯಾಧೀಶರಾಗಿದ್ದಾರೆ. ಇದಲ್ಲದೆ, ಪ್ರಸ್ತುತ ಕರ್ನಾಟಕ ಹೈಕೋರ್ಟ್ನಿಂದ ಬಂದಿರುವ ನ್ಯಾಯಾಧೀಶರಲ್ಲಿ ಎರಡನೇ ಹಿರಿಯ ನ್ಯಾಯಾಧೀಶರಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k