ಕಲಬುರಗಿ: ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರು ಗಂಭೀರವಾಗಿ ಗಾಯಗೊಂಡಿರವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊನಗುಂಟ ಗ್ರಾಮದಲ್ಲಿ ನಡೆದಿದೆ.
12 ವರ್ಷದ ನಾಗರಾಜ್ ಮತ್ತು 15 ವರ್ಷದ ಮಲ್ಲು ಗಾಯಗೊಂಡ ಸಹೋದರರು. ಘಟನೆಯಲ್ಲಿ ಮಲ್ಲುವಿನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಅವನ ತಮ್ಮ ನಾಗರಾಜ್‍ಗೆ ಎದೆಯಲ್ಲಿ ಗಂಭೀರ ಗಾಯವಾಗಿದೆ. ಸದ್ಯಕ್ಕೆ ಇಬ್ಬರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಆಗಿದ್ದೇನು?
ಶನಿವಾರ ಬೆಳಗ್ಗೆ ಇಬ್ಬರು ಸೇರಿಕೊಂಡು ಮನೆಯಲ್ಲಿನ ಕಾರ್ಬನ್ ಕೆ6 ಮೊಬೈಲ್ ಬ್ಯಾಟರಿಯನ್ನು ತೆಗೆದುಕೊಂಡು ಅದಕ್ಕೆ ಸಣ್ಣದಾದ ವಯರ್‍ನಿಂದ ಎಲ್‍ಇಡಿ ಬಲ್ಬ್‍ಗೆ ಕನೆಕ್ಷನ್ ಕೊಡಲು ಹೋಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬ್ಯಾಟರಿಯಲ್ಲಿ ಸ್ಪಾರ್ಕ್ ಆಗಿ ಸ್ಫೋಟಗೊಂಡಿದೆ. ಇದರಿಂದ ಮಲ್ಲುವಿನ ಎದೆ ಮತ್ತು ಮುಖದ ಭಾಗದ ಮೇಲೆ ಕಿಡಿಗಳು ಬಿದ್ದಿವೆ. ಹೀಗಾಗಿ ಮಲ್ಲುವಿನ ದೇಹ ಮತ್ತು ಮುಖದ ಭಾಗ ಸುಟ್ಟ ಗಾಯಗಾಳಾಗಿವೆ. ಅಲ್ಲದೇ ನಾಗರಾಜ್ ಕಣ್ಣಿಗೆ ಬ್ಯಾಟರಿಯ ಬೆಂಕಿಯ ಕಿಡಿಗಳು ತಗುಲಿ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಮಕ್ಕಳ ತಂದೆ ಈಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ವೈದ್ಯ ಡಾ. ಶರಣಬಸಪ್ಪ ಹರವಾಳ ಪ್ರತಿಕ್ರಿಯಿಸಿ, ಇಬ್ಬರು ಹುಡುಗಾಟದಿಂದ ಗಾಯಗೊಂಡಿದ್ದಾರೆ. ಗಾಯಾಳು ನಾಗರಾಜ್ ನನ್ನ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಮಲ್ಲುನಿಗೆ ಎದೆ ಮತ್ತು ಕೈಗೆ ಗಾಯವಾಗಿದ್ದು, ಅವನನ್ನು ಶಹಾಬಾದ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ನಾಗರಾಜ್‍ನ ಕಣ್ಣಿಗೆ ಗಾಯವಾಗಿದ್ದರಿಂದ ದೃಷ್ಟಿ ಮತ್ತೆ ಬರೋದು ಅನುಮಾನ ಅಂತ ಹೇಳಿದ್ದಾರೆ.
Advertisement
ನಾವು ಈಗ ಪ್ರಥಮ ಚಿಕಿತ್ಸೆ ನೀಡಿದ್ದೇವೆ. ಆದರೆ ಕಣ್ಣಿಗೆ ಎಷ್ಟರ ಮಟ್ಟಿಗೆ ಡ್ಯಾಮೇಜ್ ಆಗಿದೆ ಅನ್ನೋದರ ಬಗ್ಗೆ ತಪಾಸಣೆ ಮಾಡಿ ನಂತರ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಆದರು ಕಣ್ಣಿನ ದೃಷ್ಟಿ ಬರೋದು ಕಷ್ಟ ಎಂದು ವೈದ್ಯರು ವಿವರಿಸಿದರು.