ವಾಷಿಂಗ್ಟನ್: ಇಂಡಿಯಾನಾದಲ್ಲಿ 7 ಮಿಲಿಯನ್ ಡಾಲರ್ ಮೌಲ್ಯದ 309 ಪೌಂಡ್ ಕೊಕೇನ್ (Cocaine) ಸಾಗಿಸುತ್ತಿದ್ದ ಇಬ್ಬರು ಭಾರತೀಯ ಟ್ರಕ್ ಚಾಲಕರನ್ನು (Indian Truck Drivers) ಬಂಧಿಸಲಾಗಿದೆ.
25 ವರ್ಷದ ಗುರುಪ್ರೀತ್ ಸಿಂಗ್ ಮತ್ತು 30 ವರ್ಷದ ಜಸ್ವೀರ್ ಸಿಂಗ್ ಕ್ರಮವಾಗಿ 2017 ಮತ್ತು 2023 ರಲ್ಲಿ ಅಮೆರಿಕಕ್ಕೆ ಪ್ರವೇಶಿಸಿದ್ದರು. ಗುರುಪ್ರೀತ್ ಸಿಂಗ್ 2023ರ ಮಾರ್ಚ್ 11 ರಂದು ಅರಿಜೋನಾದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ. ಜಸ್ವೀರ್ ಸಿಂಗ್ 2017ರ ಮಾರ್ಚ್ 21 ರಂದು ಕ್ಯಾಲಿಫೋರ್ನಿಯಾದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ. ಇದನ್ನೂ ಓದಿ: 66 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರ ನಡೆದ ಅಮೆರಿಕ – ಟ್ರಂಪ್ ನಿರ್ಧಾರ ಮಾಡಿದ್ದೇಕೆ?
ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ವೇಳೆ ಮಾದಕವಸ್ತು ಪತ್ತೆಯಾಗಿದೆ. ಸೆಮಿ-ಟ್ರಕ್‌ನ ಸ್ಲೀಪರ್ ಬರ್ತ್‌ನಲ್ಲಿ ಕೊಕೇನ್ ಇರುವುದು ಕಂಡುಬಂದಿದೆ. ‘113,000 ಕ್ಕೂ ಹೆಚ್ಚು ಅಮೆರಿಕನ್ನರನ್ನು ಕೊಲ್ಲಲು ಇದು ಸಾಕಾಗಿತ್ತು’ ಎಂದು ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಹೇಳಿದೆ.
ವಾಹನದಲ್ಲಿ ಕೊಕೇನ್ ಇರುವುದರ ಬಗ್ಗೆ ಸ್ನಿಫರ್ ಶ್ವಾನ ಘಟಕವು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು. ಪೊಲೀಸರಿಗೆ ಟ್ರಕ್‌ನ ಸ್ಲೀಪರ್ ಬರ್ತ್‌ನಲ್ಲಿ ಕಂಬಳಿಯಿಂದ ಮುಚ್ಚಿದ ಹಲವಾರು ರಟ್ಟಿನ ಬಾಕ್ಸ್‌ಗಳು ಸಿಕ್ಕಿವೆ.
ನಂತರ ಇಬ್ಬರು ಚಾಲಕರನ್ನು ಪುಟ್ನಮ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು. ಆರೋಪಿಗಳು ಮಾದಕ ದ್ರವ್ಯ ವ್ಯವಹಾರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ಮೇಲೆ ಗಡೀಪಾರು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಇಂಡಿಯಾನಾ ರಾಜ್ಯ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ 500% ಸುಂಕ? – ಮಸೂದೆಗೆ ಟ್ರಂಪ್ ಒಪ್ಪಿಗೆ
ಇಬ್ಬರೂ ವ್ಯಕ್ತಿಗಳು ಟ್ರಕ್ ಒಳಗೆ ಏನಿದೆ ಎಂದು ತಮಗೆ ತಿಳಿದಿಲ್ಲ ಎಂದು ಪೊಲೀಸರು ಮುಂದೆ ಹೇಳಿದ್ದರು. ಟ್ರಕ್ಕಿಂಗ್ ಕಂಪನಿಯು ಟ್ರಕ್ ಅನ್ನು ರಿಚ್ಮಂಡ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗೆ ತೆಗೆದುಕೊಂಡು ಹೋಗಿ ಲೋಡ್‌ಗಾಗಿ ಕಾಯುವಂತೆ ಸೂಚಿಸಿದೆ ಎಂದಿದ್ದರು.

