ಟೊರೊಂಟೊ: ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಲಘು ವಿಮಾನವೊಂದು ಪತನಗೊಂಡು (Plane Crash) ತರಬೇತಿಯಲ್ಲಿದ್ದ ಇಬ್ಬರು ಭಾರತದ ( India) ಪೈಲಟ್‍ಗಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಮೃತ ಪೈಲಟ್‍ಗಳನ್ನು ಮುಂಬೈನ (Mumbai) ಅಭಯ್ ಗದ್ರು (25) ಮತ್ತು ಯಶ್ ರಾಮುಗಡೆ ಎಂದು ಗುರುತಿಸಲಾಗಿದೆ. ಪೈಪರ್ ಪಿಎ -34 ಸೆನೆಕಾ ಎಂಬ ವಿಮಾನದಲ್ಲಿ ಅವರು ಪ್ರಯಾಣಿಸುತ್ತಿದ್ದರು. ಈ ವೇಳೆ ವ್ಯಾಂಕೋವರ್‌ನಿಂದ 100 ಕಿಮೀ ಪೂರ್ವದಲ್ಲಿರುವ ಚಿಲ್ಲಿವಾಕ್‍ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು
Advertisement
Advertisement
ಮೃತದೇಹವನ್ನು ಮುಂಬೈಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಅವರ ಕುಟುಂಬಸ್ಥರೊಂದಿಗೆ ಮಾತಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಪತನಗೊಂಡ ವಿಮಾನವನ್ನು 1972 ರಲ್ಲಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ. ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು
Web Stories