ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾ(ಎಲ್‍ಇಟಿ)ದ ಇಬ್ಬರು ಸ್ಥಳೀಯ ‘ಹೈಬ್ರೀಡ್’ ಉಗ್ರರನ್ನು ಸೋಮವಾರ ಶ್ರೀನಗರದಲ್ಲಿ ಬಂಧಿಸಲಾಗಿದ್ದು, ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‍ಇಟಿ, ಟಿಆರ್‌ಎಫ್‍ನ ಇಬ್ಬರು ಸ್ಥಳೀಯ ಉಗ್ರರನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. 15 ಪಿಸ್ತೂಲ್‍ಗಳು, 300ಕ್ಕೂ ದೋಷಾರೋಪಣೆಯ ಸಾಮಗ್ರಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.
Advertisement
Srinagar Police arrested 2 local hybrid terrorists of proscribed terror outfit LeT/TRF. Incriminating materials, arms & ammn including 15 pistols, 30 magazines, 300 rounds & 1 silencer recovered. Case registered. Investigation going on. It is a big success for Police: IGP Kashmir pic.twitter.com/GlQxePMf5j
— Kashmir Zone Police (@KashmirPolice) May 23, 2022
ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಚೆಕ್‌ಪೋಸ್ಟ್ ಬಳಿಗೆ ಬಂದ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದಾಗ ಅವರನ್ನು ಬೆನ್ನತ್ತಿದ್ದ ಜಂಟಿ ಕಾರ್ಯಾಚರಣೆ ಪಡೆ ಬಂಧಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಗೋಮಾಂಸ ತಿನ್ನೋದಾದ್ರೆ ತಿನ್ನಲಿ, ವಕೀಲಿಕೆ ಮಾಡೋದು ಬೇಡ: ಛಲವಾದಿ ನಾರಾಯಣಸ್ವಾಮಿ
Advertisement
Advertisement
ಈ ಬಗ್ಗೆ ಐಜಿಪಿ ಮಾತನಾಡಿ, ಟಿಆರ್‌ಎಫ್ ಅಥವಾ ದಿ ರೆಸಿಸ್ಟೆನ್ಸ್ ಫ್ರಂಟ್ ಎಇಟಿಯ ಒಂದು ಶಾಖೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದು ಪೊಲೀಸರಿಗೆ ದೊಡ್ಡ ಯಶಸ್ಸು ಎಂದು ಹೇಳಿದರು. ಇದನ್ನೂ ಓದಿ: ಎಷ್ಟು ಹೇಳಿದ್ರೂ ಓದ್ಲಿಲ್ಲ, ಸತ್ತವರ ಮನೆ ಮುಂದೆ ತಮಟೆ ಬಡಿಯಲು ಹೋಗ್ತಿದ್ರಿ – ಶಿಕ್ಷಕರ ಕ್ಲಾಸ್