– 2013ರಲ್ಲಿ ಈ ಜಾಗದ ಮೇಲೆ ಸಾಲ ನೀಡಿತ್ತು ಎಸ್‌ಬಿಐ
ಬಾಗಲಕೋಟೆ: ರೈತರ ಜಮೀನು, ಮಠ, ಮಂದಿರಗಳು, ಗೋಮಾಳ ಜಾಗೆ ಹೀಗೆ ಸುಮಾರು ಆಸ್ತಿಗಳು ವಕ್ಫ್ ಆಸ್ತಿಗೆ (Waqf Property) ಸೇರಿತ್ತು. ಈಗ ಜಿಲ್ಲೆಯಲ್ಲಿ ಹಿಂದೂ ಸ್ಮಶಾನ ಜಾಗಗಳು (Hindu Smashan Bhumi) ಸಹ ವಕ್ಪ್ ಮಂಡಳಿಗೆ ಸೇರಿದೆ.
ಜಮಖಂಡಿ (Jamkhandi) ತಾಲೂಕಿನ ಸನಾಳ ಗ್ರಾಮದ 2 ಎಕರೆ 30 ಗುಂಟೆ ಮತ್ತು ರಬಕವಿ ಬನಹಟ್ಟಿ (Rabakavi Banahatti) ತಾಲೂಕಿನ ಹೊಸೂರು ಗ್ರಾಮದ 1 ಎಕ್ರೆ 39 ಗುಂಟೆ ರುದ್ರಭೂಮಿ ಜಾಗಗಳು ವಕ್ಪ್ ಮಂಡಳಿಗೆ ಸೇರಿವೆ ಎಂದು ಪಹಣಿಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಸರ್ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್ ಹೆಸರಿಗೆ
ಸಾರ್ವಜನಿಕರ ಅವಶ್ಯಕತೆಗಾಗಿ ಹೊಸೂರು ಗ್ರಾಮದ ಸನ್ನವ್ವ ಕೋಲಾರ್ ಎಂಬುವರು ತಮ್ಮ ಜಮೀನನ್ನು ಹಿಂದೂ ರುದ್ರ ಭೂಮಿಗೆ ಕೊಡುಗೆಯಾಗಿ ನೀಡಿದ್ದಾರೆ. ಇಲ್ಲಿ ನಾವು ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದೇವೆ. ಈ ಜಾಗ ವಕ್ಫ್ ಮಂಡಳಿಗೆ ಸೇರಿದ್ದು ಹೇಗೆ ಎಂದು ಪ್ರಶ್ನಿಸಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೂ ರುದ್ರಭೂಮಿ ಎಂದು ಉಲ್ಲೇಖವಾಗಿದ್ದ ಜಾಗದ ಪಹಣಿಯಲ್ಲಿ 2020ರ ಅಕ್ಟೋಬರ್ 13 ರಿಂದ ಖಬರಸ್ಥಾನ ಸುನ್ನಿ ವಕ್ಪ್ ಹೆಸರಿಗೆ ದಾಖಲಾಗಿದೆ.
ಅಚ್ಚರಿ ಏನೆಂದರೆ ಹೊಸೂರು ಗ್ರಾಮದ ಜಾಗದ ಮೇಲೆ 2013 ರಲ್ಲಿ ಜಮಖಂಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) 3 ಲಕ್ಷ ರೂ. ಸಾಲ ನೀಡಿದೆ. ಬ್ಯಾಂಕ್ ಸಾಲ ನೀಡಿದ್ದು ಪಹಣಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಈ ಜಾಗ ವಕ್ಫ್ ಬೋರ್ಡ್‌ಗೆ ಸೇರಿದ್ದು ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.