ದಾವಣಗೆರೆ: ದೀಪಾವಳಿ ಅಮಾವಾಸ್ಯೆಗೆ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲಾದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಬಳಿ ನಡೆದಿದೆ.
ತುಂಗಾಭದ್ರ ನದಿ (Tungabhadra River) ಪಾತ್ರದಲ್ಲಿ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಗ್ರಾಮದ ಪರಶುರಾಮ್(14) ಹಾಗೂ ಆತನ ಚಿಕ್ಕಪ್ಪ ಅಣ್ಣಪ್ಪ (45) ಮೃತ ದುರ್ದೈವಿಗಳು. ಮರಳುಗಾರಿಕೆಯಿಂದ ತುಂಗಾಭದ್ರ ನದಿಯಲ್ಲಿ ಗುಂಡಿಗಳಾಗಿರುವ ಹಿನ್ನೆಲೆ, ಗುಂಡಿಗಳಲ್ಲಿ ಸಿಲುಕಿ ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ದುರಾದೃಷ್ಟವಶಾತ್ ರಕ್ಷಣೆ ಮಾಡುವ ವೇಳೆಗೆ ಇಬ್ಬರೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಕೊಡಲು ಆಗದ ಕಾಂಗ್ರೆಸ್ ಸರ್ಕಾರ ಯೂಟರ್ನ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ
ತುಂಗಾಭದ್ರ ನದಿಪಾತ್ರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ರಮ ಮರಳುಗಾರಿಕೆಯಿಂದಲೇ ಇಂತಹ ಅನಾಹುತ ಆಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಹರಿಹರ (Harihara) ಗ್ರಾಮಾಂತರ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಳಮೀಸಲಾತಿಗೆ ಆಯೋಗ ರಚನೆ, ವಿಳಂಬ ನೀತಿ ಅಲ್ಲ: ಸಿದ್ದರಾಮಯ್ಯ