ಚಾಮರಾಜನಗರ: ಜೋತುಬಿದ್ದ ವಿದ್ಯುತ್ ವೈರ್‌ಗೆ (Electric Wire) ಇಬ್ಬರು ರೈತರು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಸ್ಕ್ (CESC) ಜೂನಿಯರ್ ಎಂಜಿನಿಯರ್ ಹಾಗೂ ಲೈನ್‌ಮ್ಯಾನ್ ಅನ್ನು ಅಮಾನತು (Suspend) ಮಾಡಲಾಗಿದೆ.
ಚಾಮರಾಜನಗರದ (Chamarajanagar) ಅಯ್ಯನಪುರದಲ್ಲಿ ರೈತರಿಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜೋತು ಬಿದ್ದಿದ್ದ ವಿದ್ಯುತ್ ವೈರ್ ಕುತ್ತಿಗೆಗೆ ಸಿಲುಕಿ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಎಂಜಿಯರ್ ಮರಿಸ್ವಾಮಿ ಹಾಗೂ ಲೈನ್‌ಮ್ಯಾನ್ ಆನಂದ್ ಎಂಬವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಚಾಮರಾಜನಗರ ಸೆಸ್ಕ್ ಇಇ ಪ್ರದೀಪ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Nvidia ದಲ್ಲಿ ವಿದ್ಯೆ ಇದೆ, ಇದರರ್ಥ ಭಾರತದಲ್ಲಿ ಜ್ಞಾನ: ಅಂಬಾನಿಯ ಮಾತಿಗೆ ಜೆನ್ಸನ್ ಹುವಾಂಗ್ ಚಪ್ಪಾಳೆ
Advertisement
Advertisement
ಪ್ರಕರಣ ಏನು?
ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ನಾಗೇಂದ್ರ ಹಾಗೂ ಮಲ್ಲೇಶ್ ಮೃತ ದುರ್ದೈವಿಗಳು. ಬುಧವಾರ ರಾತ್ರಿ ಊಟ ಮಾಡಿ ಬೈಕ್‌ನಲ್ಲಿ ಜಮೀನಿಗೆ ತೆರಳಿದ್ದರು. ಜಮೀನಿನಿಂದ ಬೈಕ್‌ನಲ್ಲಿ ವಾಪಸ್ ಬರುವಾಗ ರಸ್ತೆ ಮಧ್ಯೆ ಜೋತು ಬಿದ್ದಿದ್ದ ಹೈಟೆನ್ಷನ್ ವೈರ್‌ಗೆ ಕುತ್ತಿಗೆ ಸಿಲುಕಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿಯೇ ಈ ಘಟನೆ ನಡೆದಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಎಂದಿನಂತೆ ಬೆಳ್ಳಂಬೆಳಗ್ಗೆ ಹೊಲಗದ್ದೆಗಳಿಗೆ ತೆರಳಲು ಬಂದ ಗ್ರಾಮದ ರೈತರಿಗೆ ರಸ್ತೆ ಮಧ್ಯೆ ವಿದ್ಯುತ್ ತಂತಿಗೆ ಇವರಿಬ್ಬರು ಸಿಲುಕಿ ಮೃತಪಟ್ಟಿರುವುದು ಗೊತ್ತಾಗಿದೆ. ಇದನ್ನೂ ಓದಿ: ಶಿವಮೊಗ್ಗ| ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ದ ಕಾರು
Advertisement
Advertisement
ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು, ರೈತ ಸಂಘದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಚೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸರಿಯಾಗಿ ವಿದ್ಯುತ್ ತಂತಿಗಳ ನಿರ್ವಹಣೆ ಮಾಡದೇ ಇರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಹರಿಹಾಯ್ದಿದ್ದರು. ಇದನ್ನೂ ಓದಿ: ಇಂದಿನಿಂದ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ – ಶಕ್ತಿದೇವತೆ ದರ್ಶನಕ್ಕೆ ಹರಿದು ಬಂದ ಭಕ್ತರ ದಂಡು