ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆ ಮುಂದುವರೆದಿದೆ. ಮಳೆ ಪರಿಣಾಮ ಹಲವೆಡೆ ಜನಜೀವನ ಅಸ್ತವ್ಯಸ್ತ ಆಗಿದೆ. ಬೀದರ್ ಮತ್ತು ಶಿವಮೊಗ್ಗದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಇನ್ನೂ 3 ದಿನ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
148 ದಿನಗಳ ಬಳಿಕ ಬೆಂಗಳೂರಿನ ಕೆಂಗೇರಿ ಸೇರಿ ಹಲವೆಡೆ ವರುಣನ ದರ್ಶನವಾಗಿದೆ. ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಶುಕ್ರವಾರ ಸಂಜೆ ಮಳೆ ಆಗಿದೆ. ರಾಮನಗರದ ವಡ್ಡರಹಳ್ಳಿಯಲ್ಲಿ ಬಿರುಗಾಳಿಸಹಿತ ಭಾರಿ ಮಳೆಗೆ ಎರಡ್ಮೂರು ಮನೆಗಳ ಮೇಲ್ಛಾವಣಿ ಎಗರಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಯಲಹಂಕದಲ್ಲಿ ಸುಧಾಕರ್‌ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ವಿಶ್ವನಾಥ್ ಪ್ರತಿಜ್ಞೆ
Advertisement
Advertisement
ಹೊಳೆನರಸೀಪುರದಲ್ಲಿ ಮಳೆ ನಡುವೆಯೇ ಸಿಎಂ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ಹಿಡಿದು ಭಾಷಣ ಕೇಳಿದ್ದಾರೆ. ಕೊನೆಗೆ ಕುರ್ಚಿಗಳನ್ನೇ ಹೊತ್ತೊಯ್ದಿದ್ದಾರೆ. ಹಾಸನದಲ್ಲಿ ಆಲಿಕಲ್ಲು ಮಳೆ ಆಗಿದೆ. ರಾಯಚೂರಿನ ಸಿಂಧನೂರಲ್ಲಿ ಮೊದಲ ಮಳೆಯಾಗಿದ್ದು, ಯುವಕನೊಬ್ಬ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದ್ದಾನೆ. ಕೊಡಗಿನಲ್ಲಿ ಒಂದು ವಾರದಿಂದ ಮಳೆ ಆಗ್ತಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗ, ಶಿವಮೊಗ್ಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಆಗಿದೆ. ನಿನ್ನೆ ಮಂಡ್ಯದಲ್ಲಿ ಆದಿಚುಂಚನಗಿರಿ ಕಮಾನು ಉರುಳಿತ್ತು. ಇದರ ಸಿಸಿಟಿವಿ ದೃಶ್ಯ ಇದೀಗ ವೈರಲ್ ಆಗಿದೆ. ರಾಜ್ಯದ ಬಹುತೇಕ ಕಡೆ ಮುಂದಿನ ಮೂರು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಬೀದರ್ ತಾಲೂಕಿನ ಬರೂರ ಗ್ರಾಮದಲ್ಲಿ ಪುಷ್ಪಲತಾ ಎಂಬ ಮಹಿಳೆ ಮರದಡಿ ಕುಳಿತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿ ಕುಳಿತಿದ್ದಾಗ, ಮರಕ್ಕೆ ಸಿಡಿಲು ಬಡಿದು ದುರ್ಮರಣ ಹೊಂದಿದ್ದಾರೆ. ಘಟನೆ ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ
Advertisement
ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿತಕ್ಕೆ ರಾಕೇಶ್ ಎಂಬ ಯುವಕ ಬಲಿಯಾಗಿದ್ದಾನೆ. ತೋಟದಲ್ಲಿ ಕೆಲಸ ಮುಗಿಸಿಕೊಂಡು ರಾಕೇಶ್ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಮಂಗಳೂರು ನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ. ತಡರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಬಂಟ್ವಾಳ, ಪುತ್ತೂರು ಭಾಗದಲ್ಲೂ ತುಂತುರು ಮಳೆಯಾಗಿದೆ. ಇಂದು ಎಲ್ಲೆಡೆ ಮಳೆಯಾಗುವ ಸಾಧ್ಯತೆ ಇದೆ.