ತುಮಕೂರು: ನಿಂತಿದ್ದ ಬಸ್‌ಗೆ ಟಿಟಿ (TT) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಕುಣಿಗಲ್ (Kunigal) ತಾಲೂಕಿನ ರಾಜ್ಯ ಹೆದ್ದಾರಿ 33 ಹುಲಿಯೂರು ದುರ್ಗ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ರಾಯಚೂರು (Raichur) ಜಿಲ್ಲೆ ಸಿಂಧನೂರು (Sindhanur) ನಿವಾಸಿ ಟಿಟಿ ಚಾಲಕ ವೀರೇಶ್ (30), ಶಶಿಕಲಾ (69) ಸಾವನ್ನಪ್ಪಿದ್ದಾರೆ. ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ ಹಾಗೂ ಪ್ರತೀಕ್ಷ ಎಂಬವರು ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ- ಸವಾರನ ಕಾಲು ಮುರಿತ, ತಲೆಗೆ ಗಂಭೀರ ಗಾಯ
ಶಶಿಕಲಾ ಹಾಗೂ ಅವರ ಕುಟುಂಬದ 11 ಮಂದಿ ಸದಸ್ಯರು ಸಿಂಧನೂರಿನಿಂದ ಮೈಸೂರಿಗೆ ಪ್ರವಾಸಕ್ಕೆಂದು ರಾತ್ರಿ ಹೊರಟಿದ್ದರು. ಕುಣಿಗಲ್ ಮಾರ್ಗವಾಗಿ ಮೈಸೂರಿಗೆ (Mysuru) ಹೋಗುತ್ತಿದ್ದ ಸಂದರ್ಭ ಗುರುವಾರ ಬೆಳಗ್ಗೆ ಡಿ.ಹೊಸಹಳ್ಳಿ (D.Hosahalli) ಗ್ರಾಮದ ಬಳಿ ನಿಂತಿದ್ದ ಖಾಸಗಿ ಬಸ್‌ಗೆ ಟಿಟಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಿಂದ ಟಿಟಿ ಚಾಲಕ ವೀರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಶಶಿಕಲಾ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು
ಈ ಕುರಿತು ಹುಲಿಯೂರು ದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು