ಶಿವಮೊಗ್ಗ: ಹೊಳೆಹೊನ್ನೂರಲ್ಲಿ (Holehonnuru) ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ (Accident) ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಮೃತ ಯುವಕರನ್ನು ಹೊನ್ನಾಳಿಯ ಲಿಂಗಾಪುರ ಗ್ರಾಮದ ಭುವನ್ (18) ಹಾಗೂ ಹೊನ್ನಾಳಿ ತಾಲೂಕಿನ ಸೋಮಲಪುರ ಗ್ರಾಮದ ಸಾಗರ್ (25) ಎಂದು ಗುರುತಿಸಲಾಗಿದೆ. ಭುವನ್ ತೆರಳುತ್ತಿದ್ದ ಬೈಕ್ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಬಳಿ ಕ್ಯಾಂಟರ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಭುವನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ನಾಗಸಮುದ್ರದ ಬಳಿ ಬೈಕ್‍ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸಾಗರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತಗಳು ನಡೆದಿವೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.