ಬಾಗಲಕೋಟೆ: ಕಾರ್ ಹಾಗೂ ಡಿಸ್ಕವರಿ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಕ್ರಾಸ್ ಬಳಿ ನಡೆದಿದೆ.
ನಿಂಗಪ್ಪ ಮಲ್ಲಾಡರ (26) ಮತ್ತು ಬಾಗವ್ವ ಸೊನ್ನದ(55) ಮೃತ ದುರ್ದೈವಿಗಳು. ಮೃತರನ್ನು ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮದವರು ಎಂದು ಗುರುತಿಸಲಾಗಿದ್ದು, ಇವರು ಅಜ್ಜಿ ಮೊಮ್ಮಗರಾಗಿದ್ದಾರೆ. ಕಾರು ಶ್ರೀನಿವಾಸ್ ಕುಲಕರ್ಣಿ ಎಂಬುವರಿಗೆ ಸೇರಿದ್ದಾಗಿದೆ.
ಮೊಮ್ಮಗ ನಿಂಗಪ್ಪ ಮಲ್ಲಾಡರ ಮತ್ತು ಅಜ್ಜಿ ಬಾಗವ್ವ ಸೋನ್ನದ ಸೀರಿಕೇರಿಯ ಸೊಸೈಟಿಯಲ್ಲಿ ಕೆಲಸ ಮುಗಿಸಿಕೊಂಡು ಬೇವಿನಮಟ್ಟಿಗೆ ಹಿಂದಿರುತ್ತಿದ್ದರು. ಡಿಸ್ಕವರಿ ಕಾರು ಬಾಗಲಕೋಟೆಯಿಂದ ಬಾದಾಮಿ ಕಡೆಗೆ ಹೊರಟ್ಟಿತ್ತು. ಸೀಗಿಕೇರಿ ಕ್ರಾಸ್ ಬಳಿ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ, ಮೊಮ್ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.