ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಯಾದ ಕಂಠೀರವ ಸ್ಟುಡಿಯೋ ಸಮುತ್ತಲಿನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಿದ್ದು, ಇನ್ನು ಎರಡು ದಿನಗಳು ಸಾರ್ವಜನಿಕರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದರು.
Advertisement
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಅವರ ಕುಟುಂಬಸ್ಥರು ಅವರ ಸಂಪ್ರದಾಯವನ್ನು ಮುಂದುವರೆಸಬೇಕಿದೆ. ಕುಟುಂಬದವರು ಸಂಪ್ರದಾಯದಂತೆ ಐದನೇ ದಿನ ಹಾಲು-ತುಪ್ಪ ಬಿಡುತ್ತೇವೆ ಎಂದು ಹೇಳಿದ್ದಾರೆ. ಕಾರ್ಯಕ್ಕೆ ತೊಡಕಾಗದಂತೆ ಕ್ರಮವಹಿಸಲಾಗುವುದು. ಅದಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್
Advertisement
ಕಂಠೀರವ ಸ್ಟುಡಿಯೋ ಜಾಗ ತುಂಬಾ ಚಿಕ್ಕದಿದೆ. ಎಲ್ಲಾ ವ್ಯವಸ್ಥೆಯನ್ನು ಅಭಿಮಾನಿಗಳಿಗೆ ಮಾಡುತ್ತೇವೆ. ಈವರೆಗೂ ಎಲ್ಲರೂ ಸಹಕಾರ ನೀಡಿದ್ದೀರಿ, ಎಲ್ಲರಿಗೂ ಧನ್ಯವಾದ ಎಂದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್
Advertisement
Advertisement
ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನಕ್ಕೆ ಎಷ್ಟು ಲಕ್ಷ ಜನ ಬಂದಿದ್ದರು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
ಮುಂದೆ ತಿಳಿಸುತ್ತೇವೆ ಎಂದು ಹೇಳಿದರು.