ಮೈಸೂರು: ಮುಡಾ ಹಗರಣ (MUDA Scam Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಸತತ 17 ಗಂಟೆಗಳ ವಿಚಾರಣೆ ಅಂತ್ಯಗೊಳಿಸಿದ್ದಾರೆ.
ನಿನ್ನೆ ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2:40 ಗಂಟೆ ವರೆಗೆ ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಟಿಕೆಟ್ ಆಯ್ಕೆ ಕಗ್ಗಂಟು – ದೋಸ್ತಿ ನಾಯಕರಲ್ಲಿ ಮೂಡದ ಒಮ್ಮತದ ನಿರ್ಧಾರ
Advertisement
Advertisement
ಎರಡು ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಅ.18 ರಂದು ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯ ವರೆಗೆ ಇ.ಡಿ ಸತತ ವಿಚಾರಣೆ ನಡೆಸಿದೆ. ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರದ ಇಂಚಿಂಚು ಮಾಹಿತಿ ಸಂಗ್ರಹಿಸಲಾಗಿದೆ.
Advertisement
Advertisement
ಸತತ 29 ತಾಸಿನ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ 12 ತಾಸು, ಎರಡನೇ ದಿನ 17 ತಾಸು ವಿಚಾರಣೆ ನಡೆಸಿದೆ. ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇ.ಡಿ ವಶಕ್ಕೆ ಪಡೆದಿದೆ. ಎಲ್ಲಾ ಹಂತದ ಅಧಿಕಾರಿಗಳ ಡ್ರಿಲ್ ನಡೆಸಿದೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ ಅಕ್ರಮ – ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ದಾಳಿ