ಮಂಡ್ಯ: ಮಂಡ್ಯದ (Mandya) ಮಳವಳ್ಳಿ (Malavalli) ತಾಲೂಕಿನ ಗಗನಚುಕ್ಕಿ ಜಲಪಾತೋತ್ಸವ (Gaganachukki Jalapathotsava) ವೈಭವೋಪೇವಾಗಿ ನಡೆಯಿತು. ಒಂದೆಡೆ ಜಗಮಗಿಸೋ ಲೈಟಿಂಗ್‌ನಲ್ಲಿ ಧುಮ್ಮಿಕ್ಕುತ್ತಿದ್ದ ಕಾವೇರಿ ಮಾತೆ ಕಂಗೊಳಿಸುತ್ತಿದ್ರೆ, ಮತ್ತೊಂದೆಡೆ ಗಾಯಕರ ಗಾನಸುಧೆ ಹಾಗೂ ನಟಿಯರ ನೃತ್ಯಕ್ಕೆ ಜನರು ಹುಚ್ಚೆದ್ದು ಕುಣಿದರು.
ಎರಡು ದಿನಗಳ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಕಾವೇರಿ ಮಾತೆಯನ್ನ ಕಣ್ತುಂಬಿಕೊಂಡರು. ಇನ್ನು 300 ಅಡಿ ಎತ್ತರದಿಂದ ಧುಮ್ಮುಕ್ಕುವ ಗಗನಚುಕ್ಕಿ ಜಲಪಾತಕ್ಕೆ ವಿವಿಧ ಬಗೆಯ ದೀಪಾಲಂಕಾರಗಳಿಂದ ಶೃಂಗಾರಿಸಲಾಗಿತ್ತು. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದ ಕಾವೇರಿ, ಬಣ್ಣಬಣ್ಣದ ಲೈಟಿಂಗ್ಸ್‌ನಿಂದಾಗಿ ಮತ್ತಷ್ಟು ವರ್ಣರಂಜಿತವಾಗಿತ್ತು. ಈ ದೃಶ್ಯ ಕಂಡು ಪ್ರವಾಸಿಗರು ಫಿದಾ ಆದರು. ಇದನ್ನೂ ಓದಿ: ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಮೊಹಾಂತಿ ಪ್ರಗತಿ ಪರಿಶೀಲನೆ ಸಭೆ – ತನಿಖೆಯ ವೇಗ ಹೆಚ್ಚಿಸುವಂತೆ ಸೂಚನೆ
ಮತ್ತೊಂದೆಡೆ ಜಲಪಾತೋತ್ಸವದ ಎರಡನೇ ದಿನವೂ ವೇದಿಕೆ ಕಾರ್ಯಕ್ರಮದಲ್ಲಿ ನಡೆದ ಸಂಗೀತ ರಸಸಂಜೆ ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಸಿತು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗಾನಸುಧೆಗೆ ಜನರು ಶಿಳ್ಳೆ, ಚಪ್ಪಾಳೆಯೊಂದಿಗೆ ಹುಚ್ಚೆದ್ದು ಕುಣಿದರೆ, ನಟಿಯರಾದ ಹರ್ಷಿಕಾ ಪೂಣಚ್ಚ, ಭಾವನ ರಾವ್ ನೃತ್ಯನೋಡಿ ಫುಲ್ ಖುಷಿಪಟ್ಟರು. ಇದಕ್ಕೂ ಮೊದಲು ಗಂಗಾವತಿ ಪ್ರಾಣೇಶ್ ಕಾಮಿಡಿ ಜನರನ್ನ ಮತ್ತಷ್ಟು ರಂಜಿಸಿತು. ಇದನ್ನೂ ಓದಿ: ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು
ಇನ್ನು ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಅಲ್ಲದೇ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಗಣಿಗ ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಲಿಗೌಡ, ಕೆ.ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾವೇರಿ ಆರತಿ ಮಾಡಲು ನಿರ್ಧಾರ ಮಾಡಿದ್ದೇವೆ. ಆದರೆ ಕೆಲವರು ಕೋರ್ಟ್ಗೆ ಹೋಗಿರುವುದರಿಂದ ತಡವಾಗಿದೆ. ಪ್ರಾರ್ಥನೆ, ಪೂಜೆ ಮಾಡಲು ಯಾರು ನಿರ್ಬಂಧ ಮಾಡಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: India vs Pakistan: ಟಾಸ್ ಬಳಿಕ ಪಾಕ್ ನಾಯಕನಿಗೆ ಹ್ಯಾಂಡ್‌ಶೇಕ್ ಮಾಡದ ಸೂರ್ಯಕುಮಾರ್ ಯಾದವ್
ಒಟ್ಟಿನಲ್ಲಿ ಎರಡು ದಿನಗಳಲ್ಲಿ ಅದ್ಧೂರಿಯಾಗಿ ನಡೆದ ಜಲಪಾತೋತ್ಸವಕ್ಕೆ ವರ್ಣರಂಜಿತ ತೆರೆಬಿತ್ತು. ಸಾಗರೋಪಾದಿಯಲ್ಲಿ ಬಂದಿದ್ದ ಜನರು ಫುಲ್ ಎಂಜಾಯ್ ಮಾಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಮನೆಗೆ ನುಗ್ಗಿ ಹೊಡಿತೀವಿ: ಪ್ರಮೋದ್ ಮುತಾಲಿಕ್