ಬೆಂಗಳೂರು: ಪೊಲೀಸರಿಂದ ಸಾರ್ವಜನಿಕರ ಸುಲಿಗೆ ಪ್ರಕರಣದಲ್ಲಿ ಇಬ್ಬರು ಕಾನ್ಸ್‌ಟೇಬಲ್‌ಗಳನ್ನು (Constable) ಸೇವೆಯಿಂದ ವಜಾ ಮಾಡಿ ಕಮಿಷನರ್ (Police Commissioner) ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಆಡುಗೋಡಿ ಠಾಣೆ ಕಾನ್ಸ್‌ಟೇಬಲ್ ಅರವಿಂದ್ ಹಾಗೂ ಮಾಳಪ್ಪ ಬಿ.ವಾಲಿಕಾರ್ ಲಂಚಕ್ಕೆ ಬೇಡಿಕೆ ಇಟ್ಟು ಸೇವೆಯಿಂದ ವಜಾಗೊಂಡವರು. ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬುವವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಕಾನ್ಸ್‌ಟೇಬಲ್‌ಗಳು 50 ಸಾವಿರ ರೂ. ದಂಡ ಹಾಗೂ ಎಫ್‍ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ತಮಗೆ ಪರಿಚಯದ ಟೀ ಅಂಗಡಿ ಒಂದಕ್ಕೆ ಪೋನ್‍ಪೇ ಮೂಲಕ ನಾಲ್ಕು ಸಾವಿರ ರೂ.ಗಳನ್ನು ಲಂಚವಾಗಿ (Bribe) ವರ್ಗಾಯಿಸಿಕೊಂಡಿದ್ದರು. ಇದನ್ನೂ ಓದಿ: ತುಳು ಸಂಸ್ಕೃತಿ, ದೈವಗಳನ್ನು ಟೀಕಿಸಿಲ್ಲ: ಆರಗ ಜ್ಞಾನೇಂದ್ರ ಸ್ಪಷ್ಟನೆ
Advertisement
Advertisement
ಈ ಬಗ್ಗೆ ಚೈತ್ರ ರತ್ನಾಕರ್ ಹಾಗೂ ಚೀರಾಸ್ ಟ್ವಿಟ್ಟರ್‌ನಲ್ಲಿ ಡಿಜಿ ಹಾಗೂ ಐಜಿಪಿಗೆ ದೂರು ನೀಡಿದ್ದರು. ಡಿಸಿಪಿ (DCP) ಮಡಿವಾಳ ಅವರು ಎಸಿಪಿ (ACP) ತನಿಖೆಗೆ ಆದೇಶಿಸಿದ್ದರು. ಲಂಚ ಪಡೆದಿರುವುದು ವಿಚಾರಣೆ ವೇಳೆ ಸಾಭೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಹೆಣ್ಣಿನ ರೂಪವಷ್ಟೇ, ಅವರ ಗುಣಗಳೇ ಬೇರೆ: ರಮೇಶ್ ಜಾರಕಿಹೊಳಿ