ಭೋಪಾಲ್: ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಂದು ನಸುಕಿನ ಜಾವ 5:50 ಗಂಟೆಗೆ ಜಬಲ್ಪುರ್ ರೈಲ್ವೆ ನಿಲ್ದಾಣದ ಹತ್ತಿರದಲ್ಲಿ ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 500 ಮೀಟರ್ ಓಡಿ ರೈಲ್ವೆ ದುರಂತ ತಪ್ಪಿಸಿದ ನಿರ್ವಾಹಕ
Advertisement
ಇಂದೋರ್‌ನಿಂದ ಹೊರಟ ರೈಲು ಜಬಲ್ಪುರ್ ರೈಲ್ವೆ ನಿಲ್ದಾಣದ 6ನೇ ಪ್ಲಾಟ್‌ಫಾರಂಗೆ ಬರಬೇಕಿತ್ತು. ಪ್ಲಾಟಫಾರಂನಿಂದ ಕೇವಲ 150 ಮೀಟರ್ ದೂರ ಇರುವಾಗಲೇ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ರಷ್ಯಾ ವಿರುದ್ಧ ಉಕ್ರೇನ್ ಪ್ರತೀಕಾರದ ದಾಳಿ – ಬೆಂಕಿ ಉಂಡೆ ಉಗುಳುವ ʻಡ್ರ್ಯಾಗನ್ ಡ್ರೋನ್ʼ ಅಸ್ತ್ರ ಪ್ರಯೋಗ
Advertisement
ಇಂದೋರ್‌ನಿಂದ ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲು ಬರುತ್ತಿತ್ತು. ಅದು ಜಬಲ್ಪುರದ ರೈಲ್ವೆ ನಿಲ್ದಾಣದ 6ನೇ ಪ್ಲಾಟ್‌ಫಾರಂಗೆ ಬರಬೇಕಿತ್ತು. ಜಬಲ್ಪುರ್ ರೈಲ್ವೆ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ರೈಲಿನ ವೇಗ ಕಡಿಮೆಯಾಗಿತ್ತು. ಆ ವೇಳೆಗಾಗಲೇ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲ ಪ್ರಯಾಣಿಕರು ತಮ್ಮ ತಮ್ಮ ಮನೆಗೆ ಸುರಕ್ಷಿತವಾಗಿ ತೆರಳಿದ್ದಾರೆ ಎಂದು ಪಶ್ಚಿಮ ವಲಯದ ರೈಲ್ವೆ ಅಧಿಕಾರಿ ಹರ್ಷಿತಾ ಶ್ರೀವಾಸ್ತವ್ ಹೇಳಿದ್ದಾರೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!
Advertisement
Advertisement
ಘಟನೆಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಇದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾನು ಸಿಎಂ ಆಗ್ತೀನಿ, ಸೀನಿಯಾರಿಟಿ ಬೇಕಿಲ್ಲ: ಎಂ.ಬಿ ಪಾಟೀಲ್