ಕರಾಚಿಯಲ್ಲಿ ಸ್ಫೋಟ| ಇಬ್ಬರು ಚೀನಿ ಪ್ರಜೆಗಳು ಬಲಿ – 8 ಮಂದಿಗೆ ಗಾಯ

Public TV
1 Min Read
Karachi Blast

ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ (Karachi Airport) ಹೊರಗೆ ಸೋಮವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ (Blast) ಇಬ್ಬರು ಚೀನಾದ ಕಾರ್ಮಿಕರು (Chinese workers) ಸಾವನ್ನಪ್ಪಿ ಎಂಟು ಮಂದಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳದಿಂದ ದಟ್ಟವಾದ ಹೊಗೆ ಏಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೂಡಲೇ ಭದ್ರತಾ ಪಡೆ ಸ್ಥಳವನ್ನು ಸುತ್ತುವರೆದಿದೆ. ಇದನ್ನೂ ಓದಿ: ಮುಡಾ ಜಟಾಪಟಿ ಮಧ್ಯೆ ಕಾಂಗ್ರೆಸ್‌ನಲ್ಲಿ ಆಂತರಿಕ ಸಭೆ – ಮಾತುಕತೆಗೆ ಬ್ರೇಕ್ ಹಾಕುತ್ತಾ ಹೈಕಮಾಂಡ್‌?

ಸ್ಫೋಟದ ತೀವ್ರತೆ ವಿಮಾನ ನಿಲ್ದಾಣದ ಕಟ್ಟಡಗಳು ಸಹ ಅಲುಗಾಡಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಚೀನಾ (China) ಈ ಕೃತ್ಯವನ್ನು ಭಯೋತ್ಪಾದಕ ದಾಳಿ ಎಂದು ಕರೆದಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

ಉಗ್ರಗಾಮಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (BLA) ಪತ್ರಕರ್ತರಿಗೆ ಇಮೇಲ್ ಮಾಡಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಎಂಜಿನಿಯರ್‌ಗಳು ಸೇರಿದಂತೆ ಚೀನಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

 

Share This Article