ಭುವನೇಶ್ವರ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ಒಡಿಶಾ ಶಾಸಕರ ಪತ್ನಿಯನ್ನು ಜಿಲ್ಲಾ ನ್ಯಾಯಾಲಯ ಅನರ್ಹಗೊಳಿಸಿದೆ.
1994ರ ಸಮಿತಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಂಠಮಾಲ್ ಜಿಲ್ಲೆಯ ದಾರಿಂಗಬಡಿ ಪಂಚಾಯಿತಿ ಅಧ್ಯಕ್ಷೆ ಸುಭ್ರೆಂತಿ ಪ್ರಧಾನ್ ಅವರನ್ನು ಕಂಠಮಾಲ್ ಜಿಲ್ಲಾ ನ್ಯಾಯಾಧೀಶರು ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. ಸುಭ್ರೆಂತಿ ಅವರು ಜಿ ಉದಯಗಿರಿ ಕ್ಷೇತ್ರದ ಶಾಸಕ ಸಲುಗಾ ಪ್ರಧಾನ್ ಅವರ ಪತ್ನಿಯಾಗಿದ್ದಾರೆ.
Advertisement
ಪಂಚಾಯತ್ ಸದಸ್ಯರು ಅಥವಾ ಅಧ್ಯಕ್ಷರಾಗಬೇಕಾದಲ್ಲಿ ಕೇವಲ ಇಬ್ಬರು ಮಕ್ಕಳನ್ನು ಮಾತ್ರ ಹೊಂದಿರಬೇಕು ಎಂಬ ಕಾನೂನಿದೆ. ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಪ್ರಧಾನ್ ಅವರಿಗೆ ಮೂವರು ಮಕ್ಕಳಿದ್ದರು. ಹೀಗಾಗಿ ಅವರನ್ನು ಕೋರ್ಟ್ ಅನರ್ಹ ಮಾಡಿ ಆದೇಶ ಪ್ರಕಟಿಸಿದೆ.
Advertisement
Advertisement
ತಜುಂಗಿಯಾ ಪಂಚಾಯಿತಿಯ ಸದಸ್ಯ ರೂಡಾ ಮಲ್ಲಿಕ್ ಪಂಚಾಯಿತಿಯ ಅಧ್ಯಕ್ಷೆಯಾಗುವ ಸಲುವಾಗಿ ತಮ್ಮ ಮಕ್ಕಳ ಸಂಖ್ಯೆಯನ್ನು ಮರೆಮಾಚಿದ್ದಾರೆ ಆರೋಪಿಸಿ ದೂರು ನೀಡಿದ್ದರು.
Advertisement
1991ರ ಜನಗಣತಿಯ ನಂತರ ಜಾರಿಗೆ ಬಂದಿರುವ ಎರಡು ಮಕ್ಕಳನ್ನು ಹೊಂದುವ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದವರಿಗೆ ಹಾಗೂ ಮಹಿಳೆಯರಿಗೆ ತಾರತಮ್ಯವಾಗಿದೆ ಎಂದು ಟೀಕಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸುಪ್ರೀಂ ಕೋರ್ಟ್ ನುವಾಪಾ ಜಿಲ್ಲೆಯ ಮಾಜಿ ಬುಡಕಟ್ಟು ಜನಾಂಗ ಸರ್ಪಂಚ್ ಅವರನ್ನು ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ವಜಾಗೊಳಿಸಲಾಗಿತ್ತು.