ಮಂಗಳೂರು: ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ಬಂಟ್ವಾಳದ (Bantwal) ನಾವೂರಿನಲ್ಲಿ ನಡೆದಿದೆ.
ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಆಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ನಾಶಿಯಾ (14) ನೀರುಪಾಲದ ಬಾಲಕಿಯರು. ಮಕ್ಕಳೊಂದಿಗೆ ಪೋಷಕರು ನೇತ್ರಾವತಿ ನದಿ (Netravati River) ತೀರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದ ಹಲವೆಡೆ ಮಳೆ ಸಾಧ್ಯತೆ
ಈಜು ಬಾರದ ಕಾರಣ ಕಣ್ಣ ಮುಂದೆ ಮಕ್ಕಳು ನೀರು ಪಾಲಾಗುತ್ತಿದ್ದರೂ ಪೋಷಕರಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.