ಚಿಕ್ಕಬಳ್ಳಾಪುರ: ಭಾರೀ ಮಳೆಗೆ ಎರಡು ಕಾರುಗಳು ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಂಗಳೂರು-ಹೈದರಾಬಾದ್ (Bengaluru- Hyderabad) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಕಾರುಗಳು ಕಾಲುವೆಯಲ್ಲಿ ಕೊಚ್ಚಿ ಹೋಗಿವೆ. ದೇವನಹಳ್ಳಿ (Devanahalli) ತಾಲೂಕಿನ ನಾಗಾರ್ಜುನಾ ಕಾಲೇಜು ಸಮೀಪದ ಅಂಡರ್ ಪಾಸ್‌ನಲ್ಲಿ ಒಂದು ಮಾರುತಿ ಆಸ್ಟರ್ ಕಾರು ಸಂಪೂರ್ಣ ಮುಳುಗಡೆಯಾಗಿದೆ. ಇನ್ನೊಂದು ಕಾರು ದಡದಲ್ಲಿ ಸಿಲುಕಿಕೊಂಡಿದೆ. ಇದನ್ನೂ ಓದಿ: ಪ್ರದೀಪ್ ಈಶ್ವರ್‌ಗೆ ಸಂತೆಯಲ್ಲಿ ಒಳ್ಳೆ ಬಳೆ ಕೊಡಿಸ್ತೀನಿ – ಸಂಸದ ಸುಧಾಕರ್
ಭಾರಿ ಮಳೆಗೆ ರಸ್ತೆಯಲ್ಲಿ ನೀರು ತುಂಬಿತ್ತು. ಹುರಳಗುರ್ಕಿ ಗ್ರಾಮದ ಕಾರಿನ ಮಾಲೀಕ ಆಸ್ಪತ್ರೆಗೆ ತೆರಳುತ್ತಿದ್ದಾಗ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಷತ್ 6 ಜನ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ದೇವನಹಳ್ಳಿ- ಚಿಕ್ಕಬಳ್ಳಾಪುರ (Chikkaballapura) ಗಡಿಯಲ್ಲಿ ಹರಿದು ಹೋಗುವ ಕಾಲುವೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಜಾಸೀಟ್ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ – ಖುದ್ದು ಫೀಲ್ಡಿಗಿಳಿದ ಲೋಕಾಯುಕ್ತ