ನವದೆಹಲಿ: ಎರಡು ವಸತಿ ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ 50 ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೊಯ್ಡಾದ ಶಾಹಬೆರಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಗ್ರೇಟರ್ ನೊಯ್ಡಾದ ಶಾಹಬೆರಿ ಗ್ರಾಮದಲ್ಲಿರುವ ಎರಡು ಕಟ್ಟಡಗಳು ಉರುಳಿಬಿದ್ದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಕಟ್ಟಡ ಕುಸಿದು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಕಾರ್ಯಾಚರಣೆ ವೇಳೆ ಈವರೆಗೂ ಮೂರು ಮೃತದೇಹಗಳನ್ನು ಹೊರೆ ತೆಗೆದಿದ್ದು, ಕಟ್ಟಡ ಅವಶೇಷಗಳಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
Advertisement
#WATCH: Dog squad has been deployed at the building collapse spot in Greater Noida's Shah Beri village. 4 NDRF teams are present. (earlier visuals) pic.twitter.com/yAxiXATHNB
— ANI UP/Uttarakhand (@ANINewsUP) July 18, 2018
Advertisement
ಕಟ್ಟಡ ನಿರ್ಮಾಣದ ವೇಳೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರ ಪರಿಣಾಮ ದುರಂತ ಸಂಭವಿಸಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಕಟ್ಟಡ ಮಾಲೀಕನಾದ ಗಂಗಾ ಶರಣ್ ದ್ವೀವೇದಿ, ಬ್ರೋಕರ್ ಕಾಸೀಮ್ ಹಾಗೂ ಮತ್ತೊರ್ವನನ್ನು ಬಂಧಿಸಿದ್ದಾರೆ. ಅಲ್ಲದೇ ಮಾಲೀಕರ ವಿರುದ್ಧ ಕಳಪೆ ಕಾಮಗಾರಿ ನಡೆಸಿ ಕಟ್ಟಡ ನಿರ್ಮಾಣ ಮಾಡಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಘಟನೆ ಸಂಬಂಧ ಪ್ರತಿಕ್ರಿಯಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದು, ಜಿಲ್ಲಾ ಪೊಲೀಸರು ರಕ್ಷಣಾ ಕಾರ್ಯದಲ್ಲಿ ನೆರವಾಗುವಂತೆ ಆದೇಶಿಸಿದ್ದಾರೆ. ಘಟನಾ ಸ್ಥಳದಲ್ಲಿ ಜಿಲ್ಲಾ ಅಧಿಕಾರಿಗಳ ತಂಡಗಳನ್ನು ನಿಯೋಜಿಸುವಂತೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
#UPCM श्री #YogiAdityanath ने ग्रेटर नोएडा में इमारत गिरने की घटना का संज्ञान लेते हुए जिला प्रशासन को तत्काल एनडीआरएफ की सहायता से हर संभव मदद मुहैया कराने व घायलों के इलाज की समुचित व्यवस्था कराने के निर्देश दिए हैं।
— CM Office, GoUP (@CMOfficeUP) July 17, 2018
ರಕ್ಷಣಾ ಪಡೆಯ ಅಧಿಕಾರಿಯಾದ ಪಿ.ಕೆ.ಶ್ರೀವತ್ಸವ್ ಮಾತನಾಡಿ, ಘಟನಾ ಸ್ಥಳದಲ್ಲಿ ಒಟ್ಟು 4 ಎನ್‍ಡಿಆರ್‍ಎಫ್ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಶ್ವಾನ ದಳವು ಸಹ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ 50 ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ತಿಳಸಿದ್ದಾರೆ.
2 male dead bodies have been recovered. 4 NDRF teams & dog squad are present on the spot, chances of any victim being alive are scant. Operations will continue till all victims are rescued: PK Srivastava, NDRF Commandant on building collapse in Greater Noida's Shah Beri village pic.twitter.com/Llhi9SS5Ku
— ANI UP/Uttarakhand (@ANINewsUP) July 17, 2018
#UPDATE Building collapse in Greater Noida's Shah Beri village: 2 NDRF teams have reached the spot. Search & rescue operations are underway. pic.twitter.com/ZcIxx1a50B
— ANI UP/Uttarakhand (@ANINewsUP) July 17, 2018