ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು

Advertisements

ರಾಯಚೂರು: ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

Advertisements

ಗಣೇಶ್(30), ಉದಯ ಕುಮಾರ್(31) ನೀರುಪಾಲಾದ ಯುವಕರು. ರಾಯಚೂರು ಜಿಲ್ಲೆಯ ದೇವಸುಗೂರು ಬಳಿ ಇರುವ ಕೃಷ್ಣಾ ನದಿಗೆ ಪುಣ್ಯಸ್ನಾನ ಮಾಡಲು ನಿನ್ನೆ ಏಳು ಜನ ಸ್ನೇಹಿತರೊಂದಿಗೆ ಗಣೇಶ್ ಮತ್ತು ಉದಯ ಕುಮಾರ್ ತೆರಳಿದ್ದರು. ಆದರೆ ನೀರಿನ ರಭಸಕ್ಕೆ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ

Advertisements

ಈ ಪರಿಣಾಮ ಇವರ ಜೊತೆಗಿದ್ದ ಸ್ನೇಹಿತರು ಆಗ್ನಿ ಶಾಮಕದಳಕ್ಕೆ ವಿಷಯ ತಿಳಿಸಿದ್ದು, ತಕ್ಷಣ ಸಿಬ್ಬಂದಿ ಬಂದು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಪ್ರಸ್ತುತ ಗಣೇಶ್ ಮೃತ ದೇಹ ಪತ್ತೆಯಾಗಿದ್ದು, ಉದಯ್‍ಗಾಗಿ ಶೋಧ ಕಾರ್ಯ ಮುಂದುವರೆದಿದೆ.

Advertisements

ಇಬ್ಬರು ರಾಯಚೂರು ನಗರದ ಎಲ್ ಬಿ ಎಸ್ ನಗರ ನಿವಾಸಿಗಳಾಗಿದ್ದು, ಏಳು ಜನ ಸ್ನೇಹಿತರು ನಿನ್ನೆ ಪುಣ್ಯಸ್ನಾನಕ್ಕೆ ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ‘ಊ ಅಂತಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

Advertisements
Exit mobile version