Connect with us

Districts

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ- ಓರ್ವನ ಸಾವು

Published

on

ಕೊಪ್ಪಳ: ಬುಧವಾರ ಮಧ್ಯಾಹ್ನ ಅಪಘಾತವೊಂದು ಕುಷ್ಟಗಿ ತಾಲೂಕಿನ ತಾವರಗೇರಿ ಬಳಿ ನಡೆದಿದೆ. ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಯುವಕ ಮೃತಪಟ್ಟಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ.

ಅಪಘಾತಕ್ಕೆ ಎರಡು ಬೈಕ್ ಗಳ ಅತಿಯಾದ ವೇಗವೇ ಕಾರಣ ಎಂದು ತಿಳಿದು ಬಂದಿದೆ. ಸವಾರರು ಅತಿ ವೇಗವಾಗಿ ಚಾಲನೆ ಮಾಡುವಾಗ ಎದುರು ಬದುರಿಗೆ ಬರುತ್ತಿದ್ದ ಬೈಕ್ ಗಳ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಎರಡು ಬೈಕ್ ಗಳು ನಜ್ಜುಗುಜ್ಜಾಗಿವೆ. ಜೊತೆಗೆ ಸ್ಥಳದಲ್ಲೇ ಸವಾರ ಮೃತನಾಗಿದ್ದು, ಯುವತಿ ಸೇರಿದಂತೆ ಮತ್ತೊಬ್ಬ ಬೈಕ್ ಸವಾರನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಬೈಕ್ ಸವಾರನ ಮಾಹಿತಿ ದೊರೆತಿಲ್ಲ. ಅಪಘಾತವಾದ ನಂತರದ ಪರಿಸ್ಥಿತಿಯನ್ನ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಪಘಾತವಾದ 30 ನಿಮಿಷಗಳ ಬಳಿಕ ಸ್ಥಳಕ್ಕೆ ಅಂಬ್ಯುಲೆನ್ಸ್ ಬಂದಿದ್ದು, ಗಾಯಾಳುಗಳನ್ನ ಆಸ್ಪತ್ರೆಯ ಸಾಗಿಸಲಾಗಿದೆ.

Click to comment

Leave a Reply

Your email address will not be published. Required fields are marked *