Connect with us

Dharwad

7 ಗೋವುಗಳ ಗೋಮಾಂಸ ಸಾಗಾಣೆ ಮಾಡುತ್ತಿದ್ದವರ ಬಂಧನ

Published

on

ಧಾರವಾಡ: ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯ ಯುವಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಮ್ಮದ ಶಫಿ ಶೇಖ ಮತ್ತು ಇಸ್ಮಾಯಿಲ್ ಬೇಫಾರಿ ಎಂಬವರೇ ಬಂಧಿತರು. ಶುಕ್ರವಾರ ರಾತ್ರಿ 7 ಗೋವುಗಳ ಮಾಂಸವನ್ನ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ರವಾನಿಸುತ್ತಿದ್ದರು. ಈ ವೇಳೆ ಕೆಲ ಯುವಕರು ಈ ಮಾಂಸ ರವಾನಿಸುತ್ತಿದ್ದ ವಾಹನವನ್ನು ತೆಡೆದು ಅಳ್ನಾವರ ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ವೇಳೆ ವಾಹನದಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Click to comment

Leave a Reply

Your email address will not be published. Required fields are marked *

www.publictv.in