ಬೆಂಗಳೂರು: ಸರಣಿ ಕಳ್ಳತನ ಮಾಡಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳಕ್ಕೆ (Maha Kumbh Mela) ಹೋಗಿದ್ದ ಇಬ್ಬರನ್ನು ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸರು (KP Agrahara Police) ಬಂಧಿಸಿರುವ ಘಟನೆ ನಡೆದಿದೆ.
Advertisement
ಬಂಧಿತ ಇಬ್ಬರ ಪೈಕಿ ಓರ್ವ ಅಪ್ರಾಪ್ತನಾಗಿದ್ದಾನೆ. ಆರೋಪಿಗಳು ಕಳೆದ ಫೆಬ್ರವರಿ 6ರಂದು ರಾತ್ರಿ ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ಮಾಡಿದ್ರು. ಬೇಕರಿ, ಮೆಡಿಕಲ್, ನಂದಿನಿ ಪಾರ್ಲರ್ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದರು. ಇದನ್ನೂ ಓದಿ: ಅಂತರರಾಜ್ಯಗಳಿಗೆ ಸಂಚರಿಸೋ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಆರ್‌ಟಿಓ ಗುಡ್‌ನ್ಯೂಸ್
Advertisement
Advertisement
ಈ ಸಂಬಂಧ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರಿಗೆ ಕಳವು ಮಾಡಿದ್ದ ನಾಲ್ವರಲ್ಲಿ ಇಬ್ಬರು ಪ್ರಯಾಗ್‌ರಾಜ್‌ಗೆ ಹೋಗಿರುವುದು ಪತ್ತೆಯಾಗಿತ್ತು. ಸದ್ಯ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂದು ಭಾರತ Vs ಆಸೀಸ್ ಸೆಮಿಸ್ ಹಣಾಹಣಿ – 2023ರ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವುದೇ ರೋಹಿತ್ ಪಡೆ?