ರೂಮಿನಲ್ಲಿ ಮಹಿಳೆ, ಪುರುಷನಿಗೆ ಥಳಿತ – ಹಾವೇರಿಯಲ್ಲಿ ನೈತಿಕ ಪೊಲೀಸ್‌ಗಿರಿ, ಇಬ್ಬರು ಅರೆಸ್ಟ್

Public TV
1 Min Read
Two arrested for moral policing in Haveri district in Karnataka

ಹಾವೇರಿ: ರಾಜ್ಯದಲ್ಲಿ ಇತ್ತೀಚಿಗೆ ನೈತಿಕ ಪೊಲೀಸ್‌ಗಿರಿ (Moral Policing) ಹೆಚ್ಚಾಗುತ್ತಿದ್ದು, ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿ ಬಿದ್ದು ಇಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹಾನಗಲ್ (Hanagal) ತಾಲೂಕಿನ ನಾಲ್ಕರ ಕ್ರಾಸ್ ಬಳಿ ಇರುವ ಹೋಟೆಲಿನಲ್ಲಿ ಈ ಘಟನೆ ನಡೆದಿದೆ. ಅನ್ಯಕೋಮಿನ ವಿವಾಹಿತ ಮಹಿಳೆ ಮತ್ತು ಪುರುಷನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‌ಆಟೋ ಚಾಲಕನೊಬ್ಬನ ಮಾಹಿತಿ ಮೇರೆಗೆ, 5 ಜನರ ಯುವಕರ ಗುಂಪು ಏಕಾಏಕಿ ಲಾಡ್ಜ್‌ಗೆ ನುಗ್ಗಿದ್ದಾರೆ. ರೂಮಿನಲ್ಲಿ ನೀರು ಬರುತ್ತಾ ಇಲ್ವೋ ಎಂಬುದರ ಬಗ್ಗೆ ಪರೀಕ್ಷೆ ಮಾಡಬೇಕು ಎಂದು ಹೇಳಿ ಯುವಕರು ಬಾಗಿಲು ತೆಗೆಸಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

two arrested for moral policing in haveri district in karnataka 1

ಈ ವೇಳೆ ಬುರ್ಖಾ ಹಾಕಿಕೊಂಡು ಬಂದು ಮಲಗಿದ್ಯಾ ಎಂದು ಪ್ರಶ್ನಿಸಿ ಮಹಿಳೆಯನ್ನು ಮತ್ತು ಪುರುಷ ಸೋಮಶೇಖರ್ ಚೆನ್ನಾಗಿ ಥಳಿಸಿದ್ದಾರೆ. ನಿನಗೆ ನಮ್ಮ ಹುಡುಗಿಯೇ ಬೇಕಾ ಎಂದು ಹೇಳಿ ಸೋಮಶೇಖರ್‌ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ.

ಪ್ರಕರಣ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ರೂಂ ಬಾಯ್ ವಿನಯ್ ಕ್ಯಾಸನೂರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಾಹಿತ ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

 

ಹಲ್ಲೆ ನಡೆಸಿದ ಅಕ್ಕಿಆಲೂರು ಗ್ರಾಮದ ಅಲ್ತಾಫ್‌ ಮತ್ತು ಮರ್ದಾನ್ ಸಾಬ್ ಎಂಬುವರನ್ನ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಹಾನಗಲ್ ಪೊಲೀಸರು ಬಲೆ ಬೀಸಿದ್ದಾರೆ.

ಮಹಿಳೆ ಮೇಲೆ ಹಲ್ಲೆ ಮಾಡಿದ ಬಳಿಕ ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಜೊತೆಗೆ ಆ ವಿವಾಹಿತ ಮಹಿಳೆಗೆ ಹಲ್ಲೆ ಮಾಡಿ 500 ಕೊಟ್ಟು ರೂಪಾಯಿ ಕೊಟ್ಟು ಕಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ.

 

Share This Article