ಯಾದಗಿರಿ: ಐಪಿಎಲ್ ಬೆಟ್ಟಿಂಗ್ (IPL Betting) ದಂಧೆ ನಡೆಸುತ್ತಿದ್ದ ಇಬ್ಬರನ್ನು ಶಹಾಪುರ ಪೋಲಿಸರು (Shahapura Police) ಬಂಧಿಸಿದ್ದು, ಮೂರು ಮೊಬೈಲ್ ಸೇರಿ 6.99 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.
ಸುರಪುರ (Surpura) ತಾಲೂಕಿನ ಕಕ್ಕಸಗೇರಾ ತಾಂಡಾದ ಪುಂಡಲೀಕ, ಏವೂರು ತಾಂಡಾದ ಹರಿಪ್ರಸಾದ್ ಇಬ್ಬರು ಬಂಧಿತ ಆರೋಪಿಗಳು.ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಹಗರಣ – ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಅರೆಸ್ಟ್
ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ಪಟ್ಟಣದ ಮಡಿವಾಳೇಶ್ವರ ಏರಿಯಾದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಎಸ್.ಎಂ.ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಇಬ್ಬರು ದಂಧೆಕೋರರನ್ನು ಬಂಧಿಸಿದ್ದಾರೆ.
ಕ್ರಿಕ್365ಡೇ ಆಪ್‌ನಲ್ಲಿ ಇಬ್ಬರು ಬೆಟ್ಟಿಂಗ್ ನಡೆಸುತ್ತಿದ್ದು, ಸದ್ಯ ಪೊಲೀಸರು ಆರೋಪಿಗಳ ಬಳಿಯಿದ್ದ 3 ಮೊಬೈಲ್ ಹಾಗೂ 6.99 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ (Shahapura Police Station) ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: 3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು