ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್

Public TV
1 Min Read
AK47

ಬೆಳಗಾವಿ: ಜಿಲ್ಲೆಯ ಹಾಲಬಾವಿಯಲ್ಲಿರುವ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದಿಂದ ಎರಡು ಎಕೆ-47 ರೈಫಲ್‍ಗಳು ಕಳುವಾಗಿರೋದು ಭಾರೀ ಆತಂಕಕ್ಕೆ ಕಾರಣವಾಗಿದೆ.

BLG ITBP

ನಕ್ಸಲ್ ನಿಗ್ರಹ ತರಬೇತಿಗೆಂದು ಬಂದಿದ್ದ ಮಧುರೈನ 45ನೇ ಬೆಟಾಲಿಯನ್ ಯೋಧರಾದ ರಾಜೇಶ್ ಕುಮಾರ, ಸಂದೀಪ ಮೀನಾ ಅವರು ತರಬೇತಿ ಕಟ್ಟಡದ ಮೂರನೇ ಮಹಡಿಯ 120 ಮೆನ್ಸ್ ಬ್ಯಾರಕ್‍ನಲ್ಲಿ ಆಗಸ್ಟ್ 17 ರಂದು ರಾತ್ರಿ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಎರಡು ಬಂದೂಕುಗಳನ್ನು ಕದ್ದೊಯ್ದಿದ್ದಾರೆ. ವಿಷಯ ತಿಳಿದ ಮೇಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಿಗಿ ಭದ್ರತೆ ನಡುವೆ ಎಕೆ-47 ರೈಫಲ್‍ಗಳು ಕಳುವಾಗಿದ್ದೇಗೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಮೊಟ್ಟೆಯ ವಿಭಿನ್ನ ಬಳಕೆ: ಕಾಂಗ್ರೆಸ್-ದಾಸೋಹ, ಬಿಜೆಪಿ-ಜನದ್ರೋಹ – ʼಕೈʼ ಟೀಕೆ

BLG POLICE STATION

ಐಟಿಬಿಪಿ ಯೋಧರು ನೀಡಿದ ದೂರು ಆಧರಿಸಿ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ವಿಭಾಗದ ಡಿಸಿಪಿ ಪಿ.ವಿ ಸ್ನೇಹಾ ನೇತೃತ್ವದ ವಿಶೇಷ ತಂಡ ಕಳುವಾದ ಬಂದೂಕುಗಳ ಬೆನ್ನತ್ತಿದೆ. ಅದೇ ಕೊಠಡಿಯಲ್ಲಿದ್ದ ಮನೀಶ್ ಪುನೇತಾ, ಮಹ್ಮದ್ ಅಸ್ಲಾಂ ಸೇರಿ ನಾಲ್ವರು ಯೋಧರ ವಿಚಾರಣೆಯನ್ನು ನಡೆಸಿದೆ. ಆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: 200 ಸಿಬ್ಬಂದಿ ನಿಯೋಜನೆ; ಇನ್ನೂ ಪತ್ತೆಯಾಗಿಲ್ಲ ಚಿರತೆ!

Live Tv
[brid partner=56869869 player=32851 video=960834 autoplay=true]

Share This Article