ಕೋಲಾರ: ಯುವತಿಗೆ ಬಣ್ಣ ಹಚ್ಚಿದ ಹಿನ್ನೆಲೆ, ಕಾನೂನು ವಿದ್ಯಾರ್ಥಿಯನ್ನು ಕಿಡ್ನಾಪ್ (Kidnap) ಮಾಡಿ ಹಲ್ಲೆ (Attack) ಮಾಡಿರುವ ಘಟನೆ ಕೋಲಾರದ (Kolar) ಬೆಳಮಾರನಹಳ್ಳಿಯಲ್ಲಿ ನಡೆದಿದೆ.
ಅಂತಿಮ ಕಾನೂನು (Law) ವಿದ್ಯಾರ್ಥಿ ಬಿ.ಸಿ.ಮಧು ಹಲ್ಲೆಗೊಳಗಾದ ಯುವಕ. ಹೋಳಿ ಹಬ್ಬದ ದಿನದಂದು ತನ್ನದೇ ಗ್ರಾಮದ ಎಂಜಿನಿಯರ್ (Engineer) ವಿದ್ಯಾರ್ಥಿನಿ ಅನುಪ್ರಿಯಾಗೆ ಮಧು ಬಣ್ಣ ಹಚ್ಚಿದ್ದ. ಇದರಿಂದ ಕೋಪಗೊಂಡ ಅನುಪ್ರಿಯಾ ಆತನ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾಳೆ. ಇದನ್ನೂ ಓದಿ: 4 ದಿನದ ನವಜಾತ ಶಿಶುವನ್ನು ತುಳಿದು ಸಾಯಿಸಿದ ಪೊಲೀಸ್
ಅನುಪ್ರಿಯಾ ಅದೇ ಗ್ರಾಮದವಳಾಗಿದ್ದು ಮಧುವಿನ ಪಕ್ಕದ ಮನೆಯಲ್ಲಿ ವಾಸವಿದ್ದಳು. ಈ ಸಲುಗೆಯಿಂದ ಮಧು ಹೋಳಿ ಹಬ್ಬದ ದಿನದಂದು ಕಾಲೇಜಿಗೆ ಬಸ್‌ನಲ್ಲಿ ಹೋಗುವ ಸಂದರ್ಭ ಆಕೆಗೆ ಬಣ್ಣ ಹಾಕಿದ್ದಾನೆ. ಇದರಿಂದ ಕೋಪಗೊಂಡ ಅನುಪ್ರಿಯಾ ಪಕ್ಕದ ದಾನಹಳ್ಳಿ ಗ್ರಾಮದ ಡಿಎನ್‌ಡಿ ಮಧು ಮತ್ತು ಆತನ ಸಹಚರರಿಗೆ ಸುಪಾರಿ ಕೊಟ್ಟು ಮಧುವಿಗೆ ಹೊಡೆಯುವಂತೆ ತಿಳಿಸಿದ್ದಾಳೆ. ಸುಪಾರಿ ಪಡೆದ ಡಿಎನ್‌ಡಿ ಮಧು ಅದೇ ಗ್ರಾಮದ ಪ್ರಮೋದ್, ಶಿವರಾಜ್, ಸುದರ್ಶನ್ ಅವರ ಸಹಾಯದಿಂದ ಮಧುಗೆ ದೂರವಾಣಿ ಮುಖಾಂತರ ಕರೆ ಮಾಡಿದ್ದಾರೆ.
ಮಾ.17 ರಂದು ಮನೆಯಲ್ಲಿದ್ದ ಬಿ.ಸಿ.ಮಧು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಳಿಕ ಬೇಕರಿ ಬಳಿ ಕರೆಸಿಕೊಂಡ ಡಿಎನ್‌ಡಿ ಮಧು, ತನ್ನ ಸಹಚರರೊಂದಿಗೆ ಮಧುವನ್ನು ಕಾರಿನಲ್ಲಿ ಕೂರಿಸಿಕೊಂಡು ಗ್ರಾಮದ ಹೊರವಲಯಕ್ಕೆ ಬಂದಿದ್ದಾರೆ. ನಂತರ ದಾನಹಳ್ಳಿ ಮತ್ತು ವಿಶ್ವನಾಥಪುರ ಗ್ರಾಮದ ಮಧ್ಯೆ ಇರುವ ನೀಲಗಿರಿ ತೋಪಿನಲ್ಲಿ ಇಳಿಸಿ ಅಲ್ಲಿಯೇ ಇದ್ದ ನೀಲಗಿರಿ ರೆಂಬೆಗಳಿಂದ ಚೆನ್ನಾಗಿ ಥಳಿಸಿ, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಹಾಕಿಕೊಂಡು ಬಂದಿದ್ದಾರೆ. ಬಳಿಕ ಶೆಡ್‌ವೊಂದರಲ್ಲಿ ಮಧುವನ್ನು ಕೂಡಿ ಹಾಕಿ ಅರೆಬೆತ್ತಲೆಗೊಳಿಸಿ ಮರದ ತುಂಡುಗಳಿಂದ ಮತ್ತು ಟ್ಯೂಬ್‌ಗಳಿಂದ ಹೊಡೆದು ಅಮಾನವೀಯ ಕೃತ್ಯವೆಸಗಿದ್ದಾರೆ. ಸುಮಾರು ಎರಡು ದಿನಗಳವರೆಗೆ ಮಧು ಅವರನ್ನು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಮಧು ಕೈಯಾರೆ ಅವರ ಮನೆಗೆ ಪೋನ್ ಮಾಡಿಸಿ ನಾನು ಧರ್ಮಸ್ಥಳ (Dharmasthala) ಹೋಗುತ್ತಿದ್ದು, ಎರಡು ದಿನಗಳ ಕಾಲ ಮನೆಗೆ ಬರುವುದಿಲ್ಲವೆಂದು ಹೇಳಿಸಿದ್ದಾರೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!
ಹಲ್ಲೆಯಿಂದಾಗಿ ಮಾರಣಾಂತಿಕವಾಗಿ ಗಾಯಗೊಂಡ ಮಧುವನ್ನು ಇದೇ ಕಿರಾತಕರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದು ಪೊಲೀಸ್ ಕೇಸ್ ಮಾಡಬೇಕು ಎಂದು ವೈದ್ಯರು ಹೇಳಿದಾಗ ಆತನಿಗೆ ಚಿಕಿತ್ಸೆ ಕೊಡಿಸಿ ಮಾ.19 ರಂದು ಗ್ರಾಮದ ಹೊರವಲಯದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ಕುಟುಂಬದವರನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತೀವ್ರ ಗಾಯಗೊಂಡ ಮಧು ಮನೆಗೆ ಬಂದಾಗ ಅವರ ಪೋಷಕರು ಕೂಡಲೇ ಆತನನು ಆಸ್ಪತ್ರೆಗೆ ದಾಖಲಿಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಮಧು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ (District Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ
ವೇಮಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಸಿದ್ದಾರೆ. ಈ ಕೃತ್ಯಕ್ಕೆ ಕಾರಣರಾದ ಅನುಪ್ರಿಯಾ ಮತ್ತು ಮತ್ತಿಬ್ಬರನ್ನು ಪೊಲೀಸರು ಬಂದಿಸಿದ್ದು, ಪ್ರಮುಖ ಆರೋಪಿ ಡಿಎನ್‌ಡಿ ಮಧು ಪರಾರಿಯಾಗಿದ್ದಾನೆ. ಒಟ್ಟು 15ಕ್ಕೂ ಹೆಚ್ಚು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಆ ಕಳ್ಳಿ ಕೋಟಿ ರೂಪಾಯಿ ಮನೆಯ ಒಡತಿ