ನ್ಯೂಯಾರ್ಕ್: ಭಾರತ (India), ಇಂಡೋನೇಷ್ಯಾ (Indonesia) ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಟ್ವಿಟ್ಟರ್ (Twitter) ತುಂಬಾ ನಿಧಾನವಾಗಿದೆ ಎಂದು ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.
ಭಾರತ, ಇಂಡೋನೇಷ್ಯಾ ಮತ್ತು ಇತರ ಹಲವು ದೇಶಗಳಲ್ಲಿ ಟ್ವಿಟರ್ ತುಂಬಾ ನಿಧಾನವಾಗಿದೆ. ಹೋಮ್‌ಲೈನ್ ಟ್ವೀಟ್‌ಗಳನ್ನು ರಿಫ್ರೆಶ್ ಮಾಡಲು 10 ರಿಂದ 15 ಸೆಕೆಂಡುಗಳು ಬೇಕಾಗುತ್ತದೆ. ಕೆಲವೊಮ್ಮೆ ಇದು ವಿಶೇಷವಾಗಿ Android ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಡ್‌ವಿಡ್ತ್/ಲೇಟೆನ್ಸಿ/ಆ್ಯಪ್‌ನಿಂದಾಗಿ ಎಷ್ಟು ವಿಳಂಬವಾಗಿದೆ ಎಂಬುದೇ ಪ್ರಶ್ನೆಯಾಗಿದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಟ್ರಂಪ್
Advertisement
Advertisement
ಯುಎಸ್‌ನಲ್ಲಿ ಅದೇ ಅಪ್ಲಿಕೇಶನ್ ರಿಫ್ರೆಶ್ ಮಾಡಲು 2 ಸೆಕೆಂಡ್ ತೆಗೆದುಕೊಳ್ಳುತ್ತದೆ. ಆದರೆ ಭಾರತದಲ್ಲಿ 20 ಸೆಕೆಂಡ್ ಬೇಕಾಗುತ್ತದೆ. ಇಂಟರ್‌ನೆಟ್ ಸಮಸ್ಯೆಯಿಂದ ಹೀಗೆ ಆಗಬಹುದು ಎಂದು ಮಸ್ಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Advertisement
ಹಲವು ದೇಶಗಳಲ್ಲಿ ಟ್ವಿಟ್ಟರ್ ತುಂಬಾ ನಿಧಾನವಾಗಿರುವುದಕ್ಕೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ
Advertisement
ಆಯಾ ದೇಶಗಳ ಇಂಟರ್‌ನೆಟ್ ವೇಗ, ಸಂಪರ್ಕ ವ್ಯವಸ್ಥೆ ಮತ್ತು ದಂತ್ತಾಂಶ ವರ್ಗಾವಣೆಗೆ ಅನುಗುಣವಾಗಿ ಟ್ವಿಟ್ಟರ್ ಕೆಲಸ ಮಾಡುತ್ತದೆ. ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದುಕೊಂಡಿಲ್ಲ ಎಂಬ ಅಭಿಪ್ರಾಯವನ್ನು ಮಸ್ಕ್ ವ್ಯಕ್ತಪಡಿಸಿದ್ದಾರೆ.