ನ್ಯೂಯಾರ್ಕ್: ಇನ್ಮುಂದೆ ಟ್ವಿಟ್ಟರ್ (Twitter) ಬಳಕೆದಾರರು ಖಾತೆಯನ್ನು ಅಮಾನತು ಮಾಡಿ ಎಂದು ಮನವಿ ಸಲ್ಲಿಸಲು ಅವಕಾಶವಿದೆ. ಫೆ.1ರಿಂದ ಇದು ಜಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಪದೇ ಪದೆ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಮಾತ್ರ ಟ್ವಿಟ್ಟರ್ ಖಾತೆಗಳನ್ನು ಅಮಾನತುಗೊಳಿಸಲಾಗುತ್ತಿತ್ತು. ಕಾನೂನುಬಾಹಿರ ವಿಷಯ ಅಥವಾ ಚಟುವಟಿಕೆಯಲ್ಲಿ ತೊಡಗುವುದು, ಹಿಂಸೆಯನ್ನು ಪ್ರಚೋದಿಸುವುದು, ಬೆದರಿಕೆ ಹಾಕುವುದು, ಇತರ ಬಳೆದಾರರಿಗೆ ಕಿರುಕುಳ ನೀಡುವುದು ಸಹ ನಿಯಮ ಉಲ್ಲಂಘನೆಯಾಗಿತ್ತು. ಇಂತಹವರ ಖಾತೆಗಳನ್ನು ಅಮಾನತು ಮಾಡಲಾಗುತ್ತಿತ್ತು. ಇದನ್ನೂ ಓದಿ: ಇಸ್ರೇಲ್ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ, 10 ಮಂದಿಗೆ ಗಾಯ
Advertisement
Advertisement
ಟ್ವಿಟ್ಟರ್ ಇನ್ಮುಂದೆ ಖಾತೆಗಳನ್ನು ಅಮಾನತುಗೊಳಿಸುವುದಕ್ಕೂ ಮುನ್ನ ಕೆಲವು ಮಾರ್ಗಗಳನ್ನು ಅನುಸರಿಸುತ್ತದೆ. ತನ್ನ ನೀತಿಗಳನ್ನು ಉಲ್ಲಂಘಿಸುವ ಟ್ವೀಟ್ಗಳ ವ್ಯಾಪ್ತಿಯನ್ನು ಸೀಮಿತಗೊಳಿಸುವುದು, ಖಾತೆಯನ್ನು ಬಳಸುವುದನ್ನು ಮುಂದುವರಿಸುವ ಮೊದಲು ಟ್ವೀಟ್ಗಳನ್ನು ತೆಗೆದುಹಾಕಲು ಬಳಕೆದಾರರನ್ನು ಕೇಳುವಂತಹ ಮೃದು ಧೋರಣೆಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
Advertisement
Advertisement
ಡಿಸೆಂಬರ್ನಲ್ಲಿ ಹಲವಾರು ಪತ್ರಕರ್ತರ ಖಾತೆಗಳನ್ನು ಅಮಾನತುಗೊಳಿಸಿದ್ದಕ್ಕಾಗಿ ಎಲೋನ್ ಮಸ್ಕ್ (Elon Musk) ಟೀಕೆಗೆ ಗುರಿಯಾಗಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಮತ್ತೆ ಪತ್ರಕರ್ತರ ಖಾತೆಗಳನ್ನು ಮರುಸ್ಥಾಪಿಸಿದ್ದರು. ಇದನ್ನೂ ಓದಿ: ಆರ್ಥಿಕ, ಆಹಾರ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕ್ಗೆ ಮತ್ತೊಂದು ಸಂಕಷ್ಟ – ನಿಗೂಢ ಕಾಯಿಲೆಗೆ 18 ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k