ನವದೆಹಲಿ: ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವನ್ನು ಕೂಡ ರಾಜಕೀಯಕ್ಕೆ ಬಳಸಿಕೊಂಡ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ದೇಶಕ್ಕಾಗಿ ಪ್ರಾಣ ಬಿಟ್ಟ ವೀರ ಯೋಧರ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡುವ ಮೂಲಕ ಅವಮಾನ ಮಾಡಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Advertisement
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಟ್ಟು 18 ಬಾರಿ ಘೋರ ಉಗ್ರರ ದಾಳಿ ನಡೆದಿದೆ. ಈ ದಾಳಿಗಳಿಗೆ 56 ಇಂಚಿನ ಎದೆ ಯಾವಾಗ ಉತ್ತರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
In the past 55 months, Pak committed more than 5000 ceasefire violations at the LoC & International border- a whopping 1000% increase compared to the last 55 months of UPA.
Where is the “56 inch chest”? Where is the “Laal Aankh”? 5/#KashmirTerrorAttack #Awantipora
— Randeep Singh Surjewala (@rssurjewala) February 14, 2019
Advertisement
ಯುಪಿಎ ಸರ್ಕಾರದ 55 ತಿಂಗಳ ಅವಧಿಯಲ್ಲಿ ಪಾಕಿಸ್ತಾನವು 5000ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಇದು 1000% ಹೆಚ್ಚಳವಾಗಿದೆ. ಇದಕ್ಕೆ ಎಲ್ಲಿದೆ 56 ಇಂಚಿನ ಎದೆ. ಎಲ್ಲಿ ಹೋಯಿತು ಕೆಂಪಾದ ಕಣ್ಣು ಎಂದು ಮೋದಿಯವರಿಗೆ ಸುರ್ಜೇವಾಲಾ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
Advertisement
Randeep Surjewala, Congress on #Pulwama attack: We strongly condemn this cowardly attack, we extend condolences to the kin of the jawans who were martyred. This is the 18th big terror attack in the last 5 years under this Modi Govt. When will the 56-inch chest reply? pic.twitter.com/kAQ5aKgCdA
— ANI (@ANI) February 14, 2019
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಈ ದಾಳಿಯಿಂದ ಮೋದಿ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎನ್ನುವುದನ್ನು ಸಾರುತ್ತದೆ. ಬಿಜೆಪಿಯು ನಾಲ್ಕು ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ನಡೆಸಿತ್ತು, ಆದರೂ ಉಗ್ರರನ್ನು ಮಾತ್ರ ಸೆದೆಬಡಿಯಲು ಆಗಲಿಲ್ಲ. ಈಗ ಅಲ್ಲಿ ರಾಜ್ಯಪಾಲರ ಮೂಲಕ ಬಿಜೆಪಿಯೇ ತನ್ನ ಅಧಿಕಾರ ಚಲಾಯಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರವನ್ನು ಈಗ ಬಿಜೆಪಿ ಆಳವಾದ ಗುಂಡಿಯಲ್ಲಿ ನೂಕಿದೆ ಎಂದು ಸುರ್ಜೇವಾಲಾ ಟ್ವೀಟ್ ಮೂಲಕ ಕಿಡಿಕಾರಿದ್ದರು. ಸುರ್ಜೇವಾಲಾ ಟ್ವೀಟ್‍ಗೆ ನೆಟ್ಟಿಗರು ರೀ-ಟ್ವೀಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv