ಮುಂಬೈ: ಈ ಬಾರಿ ಲೋಕಸಭಾ ಚುನಾಣೆಯಲ್ಲಿ ನಟ ಅಕ್ಷಯ್ ಕುಮಾರ್ ಮತದಾನ ಮಾಡಿರಲಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷಯ್ ಕುಮಾರ್ ನಾಗರೀಕತ್ವದ ಕುರಿತಾಗಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದ ಕಿಲಾಡಿ, ನಾನು ಕೆನಡಾ ಪಾಸ್‍ಪೋರ್ಟ್ ಹೊಂದಿದ್ದೇನೆ. ಕಳೆದ ಏಳು ವರ್ಷಗಳಿಂದ ಕೆನಡಾಗೆ ಭೇಟಿ ನೀಡಿಲ್ಲ. ಭಾರತದಲ್ಲಿಯೇ ಕೆಲಸ ಮಾಡುತ್ತಿದ್ದು, ಇಲ್ಲಿಯೇ ತೆರಿಗೆ ಪಾವತಿ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಇದೀಗ ನೆಟ್ಟಿಗರು ಅಕ್ಷಯ್ ಐದು ವರ್ಷದ ಹಿಂದೆ ಕೆನಡಾಗೆ ತೆರಳಿದ್ದನ್ನು ಸಾಕ್ಷಿ ಸಹಿತ ರಿವೀಲ್ ಮಾಡಿದ್ದಾರೆ.
Advertisement
ತಮ್ಮ ನಾಗರೀಕತ್ವದ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವ ವೇಳೆ ಅಕ್ಷಯ್ ಕುಮಾರ್ ಏಳು ವರ್ಷಗಳಿಂದ ಕೆನಡಾಗೆ ಭೇಟಿ ನೀಡಿಲ್ಲ ಎಂಬುದನ್ನು ಹೇಳಿದ್ದರು. ಆದರೆ 2014ರಲ್ಲಿ ಅಕ್ಷಯ್ ಕುಮಾರ್ ಕೆನಡಾದ ಟೊರಾಂಟೋದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Advertisement
ಗಾಯಕ ಮಿಕಾ ಸಿಂಗ್ 2014ರಲ್ಲಿ ಮಾಡಿದ್ದ ಟ್ವೀಟ್ ಸ್ಕ್ರೀನ್ ಶಾಟ್, ನೆಟ್ಟಿಗರು ಬಳಕೆ ಮಾಡಿ ಅಕ್ಷಯ್ ಕುಮಾರ್ ಗೆ ಟಾಂಗ್ ನೀಡುತ್ತಿದ್ದಾರೆ. ಗುಡ್ ಮಾರ್ನಿಂಗ್, ಅಕ್ಷಯ್ ಕುಮಾರ್, ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ, ರಾಹುಲ್ ಖನ್ನಾ ನಿಮ್ಮ ಜೊತೆಗಿನ ಟೊರಾಂಟೋದಲ್ಲಿಯ ಪಾರ್ಟಿ ಚೆನ್ನಾಗಿತ್ತು. ಕಿಶೋರ್ ಲೂಲಾ ಎಂಬ ಹ್ಯಾಶ್ ಟ್ಯಾಗ್ ಮಿಕಾ ಸಿಂಗ್ ಬಳಸಿದ್ದಾರೆ.
Advertisement
Advertisement
ಅಕ್ಷಯ್ ಕುಮಾರ್ ಇತ್ತೀಚೆಗೆ ನೀಡಿದ ಹೇಳಿಕೆಯ ಸ್ಕ್ರೀನ್ ಶಾಟ್‍ಗೆ ಟೊರಾಂಟೋದಲ್ಲಿ ಭಾಗಿಯಾಗಿದ್ದ ಎನ್ನಲಾದ ಸಂಗೀತ್ ಕಾರ್ಯಕ್ರಮದ ಫೋಟೋವನ್ನು ಸೇರಿಸಿ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಅಂದು ಅಕ್ಷಯ್ ಕುಮಾರ್ ಹೇಳಿದ್ದೇನು?
ನನ್ನ ನಾಗರೀಕತ್ವದ ಬಗ್ಗೆ ಜನರಿಗೆ ಯಾಕಿಷ್ಟು ಕುತೂಹಲ ಎಂದು ಗೊತ್ತಾಗುತ್ತಿಲ್ಲ. ನಾಗರೀಕತ್ವದ ಕುರಿತಾಗಿ ಕೆಲವರು ಊಹಾಪೋಹ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ನಾನು ಕೆನಡಾ ಪಾಸ್‍ಪೋರ್ಟ್ ಹೊಂದಿರುವ ವಿಚಾರವನ್ನು ಎಂದೂ ಮರೆ ಮಾಡುವ ಪ್ರಯತ್ನ ಮಾಡಿಲ್ಲ. ಕೆನಡಾಗೆ ಭೇಟಿ ನೀಡಿ ಏಳು ವರ್ಷಗಳೇ ಕಳೆದಿವೆ. ಭಾರತದಲ್ಲಿ ಕೆಲಸ ಮಾಡುತ್ತಿದ್ದು, ತೆರಿಗೆಯನ್ನು ಇಲ್ಲಿಯೇ ಪಾವತಿಸುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ಭಾರತದ ಮೇಲಿನ ನನ್ನ ಪ್ರೀತಿಯನ್ನು ಯಾರ ಮುಂದೆಯೂ ಸಾಬೀತು ಮಾಡುವ ಅವಶ್ಯಕತೆ ನನಗಿಲ್ಲ. ಪದೇ ಪದೇ ನನ್ನ ನಾಗರೀಕತ್ವವನ್ನು ವಿವಾದ ಮಾಡುತ್ತಿರೋದಿರಿಂದ ತುಂಬಾ ಬೇಸರವಾಗುತ್ತಿದೆ. ಇದು ನನ್ನ ವೈಯಕ್ತಿಕ ವಿಚಾರವಾಗಿದ್ದು, ಯಾವುದೇ ರಾಜಕೀಯಕ್ಕೆ ಸಂಬಂಧಿಸಿದಲ್ಲ. ದೇಶದ ಅಭಿವೃದ್ಧಿಯಲ್ಲಿ ನನ್ನಿಂದಾದ ಕೆಲಸವನ್ನು ಮಾಡುತ್ತಿರುತ್ತೇನೆ. ಭಾರತವನ್ನು ಮತ್ತಷ್ಟು ಸದೃಢವನ್ನಾಗಿ ಮಾಡೋಣ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದರು.
— Akshay Kumar (@akshaykumar) May 3, 2019