ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ

Public TV
2 Min Read
POLICE DGL

ನವದೆಹಲಿ: ಕರ್ಫ್ಯೂ ಸಮಯದಲ್ಲಿ ಕ್ರಿಕೆಟ್ ಆಡಬಹುದಾ ಎಂದು ಒಬ್ಬ ಯುವಕ ದೆಹಲಿ ಪೊಲೀಸರನ್ನು ಟ್ವೀಟ್ ನಲ್ಲಿ ಕೇಳಿದ್ದಾನೆ. ಇದಕ್ಕೆ ಪೊಲೀಸರು ಲಘಯವಾಗಿಯೇ ಉತ್ತರಿಸಿದ್ದಾರೆ. ಪ್ರಸ್ತುತ ಈ ಸಂಭಾಷಣೆ ಟ್ವಿಟ್ಟರ್ ನಲ್ಲಿ ಫುಲ್ ವೈರಲ್ ಆಗಿದೆ.

night curfew 1ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತದ ಹಲವು ಕಡೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ದೆಹಲಿ ಸರ್ಕಾರ ಸಹ ಇಂದಿನಿಂದ ವಾರಾಂತ್ಯದ ಕರ್ಫ್ಯೂವನ್ನು ವಿಧಿಸಿದೆ. ಪರಿಣಾಮ ಜನರಿಗೆ ಕರ್ಫ್ಯೂ ಬಗ್ಗೆ ಯಾವುದೇ ಅನುಮಾನವಿದ್ದರೂ ಟ್ವೀಟ್ ನಲ್ಲಿ ಕೇಳುವ ಅವಕಾಶವಿತ್ತು. ಅದಕ್ಕೆ ಯುವಕ ಪುನಿತ್ ಶರ್ಮಾ ಕರ್ಫ್ಯೂ ಸಮಯದಲ್ಲಿ ಕ್ರಿಕೆಟ್ ಆಡಬಹುದಾ? ಎಂದು ಪ್ರಶ್ನೆ ಕೇಳಿ ಸುದ್ದಿಯಾಗಿದ್ದಾನೆ. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

ಟ್ವೀಟ್‍ನಲ್ಲಿ ಏನಿದೆ?
ಪುನೀತ್ ವಾರಾಂತ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಪ್ಲಾನ್ ಮಾಡಿಕೊಂಡಿದ್ದಾನೆ. ಆದರೆ ಈ ಕರ್ಫ್ಯೂನಿಂದ ಬೇಸರಗೊಂಡ ಆತ ನೇರವಾಗಿ ಪೊಲೀಸರಿಗೆ ಪ್ರಶ್ನೆಯನ್ನು ಟ್ವೀಟ್ ಮಾಡುವ ಮೂಲಕ ಕೇಳಿದ್ದಾನೆ. ಪುನೀತ್ ಈ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ದೆಹಲಿಯಲ್ಲಿ ಕ್ರಿಕೆಟ್ ಆಡಬಹುದೇ? ಈ ವೇಳೆ ನಾವು ಕೋವಿಡ್ ಪ್ರೋಟೋಕಾಲ್‌ಗಳಾದ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾನೆ.

ಈ ಪ್ರಶ್ನೆ ನೋಡಿದ ದೆಹಲಿ ಪೊಲೀಸರು ತಮಾಷೆಯಾಗಿ ಉತ್ತರಿಸಿದ್ದು, ಇದೊಂದು ‘ಸಿಲ್ಲಿ ಪಾಯಿಂಟ್’ ಸರ್. ಈ ಸಮಯದಲ್ಲಿ ನಾವು ಇನ್ನು ಎಚ್ಚರದಿಂದ ಇರಬೇಕು. ಅಲ್ಲದೆ, ದೆಹಲಿ ಪೊಲೀಸರು ಈ ರೀತಿ ಸಿಲ್ಲಿಯಾಗಿ ಆಡುವವರನ್ನು ಹಿಡಿಯಲು ಯಾವಾಗಲೂ ಸಿದ್ಧವಾಗಿರುತ್ತಾರೆ ಎಂದು ಟ್ವೀಟ್ ಗೆ ರಿಪ್ಲೈ ಮಾಡಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

ಒಂದು ವೇಳೆ ಜನರು ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಬಹಳ ಸೂಕ್ಷ್ಮವಾಗಿ ಟ್ವೀಟ್ ಮೂಲಕ ಪೊಲೀಸರು ಯುವಕನ ಜೊತೆಗೆ ಸಾಮಾನ್ಯರಿಗೂ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *