ನ್ಯೂಯಾರ್ಕ್: ಸಾಮಾಜಿಕ ತಾಣವಾದ ಟ್ವಿಟ್ಟರ್‌ನ (Twitter) 280 ಅಕ್ಷರ ಮಿತಿಯನ್ನು 1,000 ಅಕ್ಷರಗಳಿಗೆ ಹೆಚ್ಚಿಸುವ ಬಗ್ಗೆ ಸಿಇಒ ಎಲಾನ್ ಮಸ್ಕ್ (Elon Musk) ಸುಳಿವು ನೀಡಿದ್ದಾರೆ. ಈ ಸಂಬಂಧ ಟ್ವಿಟ್ಟರ್ ಬಳಕೆದಾರರ ಸಲಹೆಗೆ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ಟರ್ ಕಂಪನಿಯು ಅನೇಕ ವಿಚಾರಗಳನ್ನು ಚರ್ಚಿಸಿದೆ. ಚರ್ಚಿತ ವಿಷಯಗಳ ಸ್ಲೈಡ್‌ಗಳು ಇವು ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ಬಳಕೆದಾರರೊಬ್ಬರು, ಅಕ್ಷರ ಮಿತಿಯನ್ನು 1,000ಕ್ಕೆ ಏರಿಸುವ ಬಗ್ಗೆ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಮಸ್ಕ್, ಮಾಡಬೇಕಾದ ಕೆಲಸದ ಪಟ್ಟಿಯಲ್ಲಿ ಇದು ಕೂಡ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್ ತುಂಬಾ ನಿಧಾನ – ಎಲಾನ್ ಮಸ್ಕ್
Advertisement
It’s on the todo list
— Elon Musk (@elonmusk) November 28, 2022
Advertisement
2017ರಲ್ಲಿ ಟ್ವಿಟರ್ 140 ಅಕ್ಷರ ಮಿತಿಯನ್ನು 280ಕ್ಕೇರಿಸಿತ್ತು. ಅತಿ ಕಡಿಮೆ ಅಕ್ಷರಗಳಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ನೆಟಿಜನ್‍ಗಳಿಗೆ ಈ ಮೂಲಕ ಹೆಚ್ಚು ಅಕ್ಷರಗಳನ್ನು ಬಳಸುವ ಅವಕಾಶ ಕಲ್ಪಿಸಿತ್ತು. ಈ ಮಿತಿಯನ್ನು 1,000ಕ್ಕೆ ಹೆಚ್ಚಿಸಿ ಎಂದು ಟ್ವಿಟ್ಟರ್ ಬಳಕೆದಾರರು ಒತ್ತಾಯಿಸಿದ್ದಾರೆ.
Advertisement
ಅಕ್ಷರದ ಮಿತಿಯು Twitter ಮತ್ತು ಇತರ ಸಾಮಾಜಿಕ ಮಾಧ್ಯಮ ಸೇವೆಗಳ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ಒಂದಾಗಿದೆ. ಟ್ವಿಟ್ಟರ್‌ನ್ನು ತಮ್ಮ ಸುಪರ್ದಿಗೆ ವಹಿಸಿಕೊಂಡ ನಂತರ ಅಕ್ಷರ ಮಿತಿ ಏರಿಕೆ ಬಗ್ಗೆಯೂ ಮಸ್ಕ್ ಆಸಕ್ತಿ ತೋರಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಹೆಚ್ಚಳ, ಭುಗಿಲೆದ್ದ ಪ್ರತಿಭಟನೆ – ತೈಲ ದರ ಭಾರೀ ಇಳಿಕೆ
Advertisement
ಮೊನ್ನೆಯಷ್ಟೇ ಟ್ವಿಟ್ಟರ್ ಬಳಕೆದಾರರೊಬ್ಬರು, ಟ್ವಿಟ್ಟರ್ ಪದಗಳ ಮಿತಿಯನ್ನು 280 ರಿಂದ 420ಕ್ಕೆ ಹೆಚ್ಚಿಸಲು ಮಸ್ಕ್‌ಗೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್, ಗುಡ್ ಐಡಿಯಾ ಎಂದು ಹೇಳಿದ್ದರು.