ನ್ಯೂಯಾರ್ಕ್: ಟ್ವಿಟ್ಟರ್ (Twitter) ಶೀಘ್ರದಲ್ಲೇ 150 ಕೋಟಿ (1.5 ಬಿಲಿಯನ್) ಅಕೌಂಟ್‌ಗಳನ್ನು ಡಿಲೀಟ್ ಮಾಡಲಾಗುವುದು ಎಂದು ಸಿಇಒ ಎಲೋನ್ ಮಸ್ಕ್ (Elon Musk) ಟ್ವೀಟ್ ಮಾಡಿ ತಿಳಿಸಿದ್ದಾರೆ.
ಟ್ಟಿಟ್ಟರ್‌ನಲ್ಲಿ ಖಾತೆ ತೆರೆದ ಮೇಲೆ ಯಾವುದೇ ಟ್ವೀಟ್ ಮಾಡದ ಹಾಗೂ ಲಾಗಿನ್ ಆಗದೇ ಇರುವ ಅಕೌಂಟ್‌ಗಳನ್ನು ಡಿಲೀಟ್ ಮಾಡಲಾಗುವುದು ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 18-25 ವರ್ಷದ ಒಳಗಿನ ಫ್ರಾನ್ಸ್ ಯುವಜನತೆಗೆ ಉಚಿತ ಕಾಂಡೋಮ್
Advertisement
Advertisement
ಟ್ಟಿಟ್ಟರ್, ನಿಮ್ಮ ನಿಜವಾದ ಖಾತೆಯ ಸ್ಥಿತಿಯನ್ನು ತೋರಿಸುವ ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ನಿಮ್ಮ ಅಕೌಂಟ್ ನಿಷೇಧಕ್ಕೊಳಗಾದರೆ, ಏಕೆ ಮತ್ತು ಹೇಗೆ ಎಂಬುದನ್ನು ತಿಳಿಯಲು ಮೇಲ್ಮನವಿ ಸಲ್ಲಿಸಬೇಕು ಎಂದು ತಿಳಿಸಿದೆ.
Advertisement
Advertisement
ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಆಗ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ಮಸ್ಕ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ