ಅಡಿಲೇಡ್: ಇಲ್ಲಿನ ಒವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಂದ ಸ್ಲೆಡ್ಜಿಂಗ್ ಒಳಗಾಗಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ತಿರುಗೇಟು ನೀಡಿದ್ದು, ಎಲ್ಲರೂ ಪೂಜಾರ ಆಗಲು ಸಾಧ್ಯವಿಲ್ಲ ಎಂದು ಹೇಳಿ ಆಸೀಸ್ ಆಟಗಾರರನ್ನು ಕಿಚಾಯಿಸಿದ್ದಾರೆ.
ಆಸೀಸ್ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಘಟನೆ ನಡೆದಿದ್ದು, ಆಸೀಸ್ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಕ್ರಿಸ್‍ನಲ್ಲಿದ್ದ ವೇಳೆ ರಿಷಬ್ ಕಿಚಾಯಿಸಿದ್ದಾರೆ. ಆಸೀಸ್ 59 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ವೇಳೆ ಉಸ್ಮಾನ್ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಆದರೆ ಈ ವೇಳೆ ಎಲ್ಲರೂ ಪೂಜಾರ ಅಲ್ಲ, ಬ್ರೋ ಎಂದು ಹೇಳಿದ್ದು, ಈ ಮಾತುಗಳು ಸ್ಟಂಪ್ ಮೈಕಿನಲ್ಲಿ ದಾಖಲಾಗಿದೆ.
Advertisement
Advertisement
ಟೀಂ ಇಂಡಿಯಾ ಸಂಕಷ್ಟದಲ್ಲಿದ್ದ ವೇಳೆ ಚೇತೇಶ್ವರ ಪೂಜಾರ ಶತಕ ಸಿಡಿಸಿ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ಉತ್ತಮ ಮೊತ್ತ ಗಳಿಸಲು ಪ್ರಮುಖ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ಪಂತ್ ಈ ಮಾತು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ರಿಷಬ್ ಆಸೀಸ್ ಆಟಗಾರನ್ನು ಕಿಚಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ : ರಿಷಬ್ ಪಂತ್ ವಿರುದ್ಧ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸಿದ ಆಸೀಸ್ ಆಟಗಾರ! ವಿಡಿಯೋ
Advertisement
ಅಂದಹಾಗೇ ಪಂತ್ ತಮ್ಮ ಮಾತಿನಲ್ಲೂ ಜಾಣತನ ತೋರಿಸಿದ್ದು, ಆಸೀಸ್ ಆಟಗಾರರಂತೆ ಎದುರಾಳಿ ಆಟಗಾರರನ್ನು ಕೆಟ್ಟದಾಗಿ ಮಾತನಾಡಿ ಟಾರ್ಗೆಟ್ ಮಾಡದೆ ಆ ಸಂದರ್ಭದಲ್ಲಿ ಬೌಲಿಂಗ್ ಮಾಡುತ್ತಿದ್ದ ಆರ್ ಅಶ್ವಿನ್ ಅವರಿಗೆ ಈ ಮಾತು ಹೇಳಿದ್ದಾರೆ. ಈ ಮೂಲಕ ಬೌಲರ್ ಗೆ ಸ್ಫೂರ್ತಿ ತುಂಬಿದ್ದಾರೆ. ಸ್ಲೆಡ್ಜಿಂಗ್ ಎಂಬ ಅಸ್ತ್ರ ಬಳಸಿ ಎದುರಾಳಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆಸೀಸ್‍ಗೆ ಪಂತ್ ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ.
Advertisement
https://www.youtube.com/watch?v=QVPu2LBX64w
https://twitter.com/vipulgudoori/status/1070875246717296640?
Epic sledging by pant
He shouts behind the stumps
"Everyone is not Pujara here guys, come on boys" ????????????????????#AUSvIND
— Vasu Jain ???????? (@vasu_1001) December 7, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv