ಬೆಂಗಳೂರು: ಪವರ್ ಸ್ಟಾರ್, ವೀರ ಕನ್ನಡಿಗ ಪುನೀತ್ ರಾಜ್‍ಕುಮಾರ್ ಈಗ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದು, ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ.
ಬುಧವಾರ ರಾತ್ರಿ ಪುನೀತ್ ಟ್ವಿಟ್ಟರ್ ಇಂಡಿಯಾಗೆ ರಿಪ್ಲೈ ಮಾಡಿದ ಟ್ವೀಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟ್ವಿಟ್ಟರ್ ಇಂಡಿಯಾ ಇದೇ ಮೊದಲ ಬಾರಿಗೆ,”ಏನು ಸಮಾಚಾರ?” ಎಂದು ಪ್ರಶ್ನಿಸಿ ಕನ್ನಡದಲ್ಲಿ ಟ್ವೀಟ್ ಮಾಡಿತ್ತು.
Advertisement
ನೀವು ಕನ್ನಡ ಮಾತಾಡಿದ್ದೆ ಒಂದು ಖುಷಿ ಕೊಡೊ ಸಮಾಚಾರ ???? https://t.co/Mpb6TeKlfM
— Puneeth Rajkumar (@PuneethRajkumar) February 18, 2020
Advertisement
ಈ ಟ್ವೀಟ್ ನೋಡಿ ಕನ್ನಡಿಗರು ಸಂತೋಷಗೊಂಡಿದ್ದರು. ಈ ಟ್ವೀಟ್ ಗೆ ಪುನೀತ್ ರಾತ್ರಿ,”ನೀವು ಕನ್ನಡ ಮಾತಾಡಿದ್ದೆ ಒಂದು ಖುಷಿ ಕೊಡುವ ಸಮಾಚಾರ” ಎಂದು ಬರೆದು ಲವ್ ಇಮೋಜಿ ಹಾಕಿ ಟ್ವೀಟ್ ಮಾಡಿದ್ದರು.
Advertisement
ಪುನೀತ್ ಟ್ವೀಟ್ ಕಂಡು ಅಭಿಮಾನಿಗಳು, ಒಂದ್ ಕಡೆ ಟ್ವಿಟ್ಟರ್ ಕನ್ನಡ ಬಳಕೆ ಮಾಡಿದ್ದು ಒಂದು ಖುಷಿ. ಅದಕ್ಕೆ ಅದಕ್ ನಮ್ಮ ಬಾಸ್ ಪ್ರತಿಕ್ರಿಯಿಸಿರುವುದು ಡಬಲ್ ಖುಷಿ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
https://twitter.com/k_virupakshappa/status/1229944203133636608
ಟ್ವಿಟ್ಟರ್ ಇಂಡಿಯಾ ನಿನ್ನೆ ಮಾಡಿದ್ದ ಟ್ವಿಟ್ಟರ್ ಅನ್ನು 2 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದರೆ, 9.6 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಎಲ್ಲ ನೀವೇ ಹೇಳ್ಬೇಕು ಸ್ವಾಮಿ. ಕರ್ನಾಟಕದಲ್ಲಿ ಕನ್ನಡಿಗರಿಗೆ ಸಂಬಂಧಪಟ್ಟ ಹಾಷ್ ಟಾಗ್ ಟ್ರೆಂಡ್ ಮಾಡಿ ಸ್ವಾಮಿ. ಬರೀ ಹಿಂದಿ, ತೆಲುಗು, ತಮಿಳರಿಗೆ ಸಂಬಂಧಪಟ್ಟ ಹಾಷ್ ಟಾಗ್ ಇರುತ್ತೆ.
— ಪ್ರದೀಪ (@_Pradeep07) February 18, 2020
ಟ್ವಿಟ್ಟರ್ ಕೇಳಿದ ಪ್ರಶ್ನೆಗೆ ಪ್ರದೀಪ್ ಅವರು, “ಎಲ್ಲ ನೀವೇ ಹೇಳ್ಬೇಕು ಸ್ವಾಮಿ. ಕರ್ನಾಟಕದಲ್ಲಿ ಕನ್ನಡಿಗರಿಗೆ ಸಂಬಂಧಪಟ್ಟ ಹಾಷ್ ಟಾಗ್ ಟ್ರೆಂಡ್ ಮಾಡಿ ಸ್ವಾಮಿ. ಬರೀ ಹಿಂದಿ, ತೆಲುಗು, ತಮಿಳರಿಗೆ ಸಂಬಂಧಪಟ್ಟ ಹಾಷ್ ಟಾಗ್ ಇರುತ್ತೆ” ಎಂದು ಪ್ರತಿಕ್ರಿಯಿಸಿದ್ದರೆ ಇನ್ನೊಬ್ಬರು,”ಎಡಿಟ್ ಅನ್ನೋ ಆಯ್ಕೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಟ್ವಿಟ್ಟರ್ ನಲ್ಲಿ ಯಾವುದೇ ಕಾರಣಕ್ಕೂ ಸ್ಟೇಟಸ್ ಆಯ್ಕೆ ಮಾತ್ರ ಕೊಡ್ಬೇಡಿ” ಎಂದು ಕೇಳಿಕೊಂಡಿದ್ದಾರೆ.
1. 1 ಟ್ವಿಟ್ – 1 ಎಡಿಟ್ ಅನ್ನೋ ಆಯ್ಕೆ ಕೊಟ್ಟು ಪುಣ್ಯ ಕಟ್ಕೋಳ್ಳಿ ????.
2. ಟ್ವಿಟರ್ನಲ್ಲಿ ಯಾವುದೇ ಕಾರಣಕ್ಕೂ ಸ್ಟೇಟಸ್ ಆಯ್ಕೆ ಮಾತ್ರ ಕೊಡ್ಬೇಡಿ ???? ????.
— ಕ್ಷಣಿಕ (@chandanso37) February 18, 2020
ಪುನೀತ್ ರಾಜ್‍ಕುಮಾರ್ 2018ರಲ್ಲಿ ಟ್ವಿಟ್ಟರ್ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಇವರ ಹೆಸರಿನಲ್ಲಿ ಖಾತೆಯೊಂದು ಓಪನ್ ಆಗಿತ್ತು. ಅಭಿಮಾನಿಗಳು ಈ ಖಾತೆ ಪುನೀತ್ ಅವರ ಖಾತೆ ಎಂದು ತಿಳಿದಿದ್ದರು. ತನ್ನ ಹೆಸರನ್ನು ದುರ್ಬಳಕೆ ಮಾಡುತ್ತಿರುವ ವಿಚಾರ ತಿಳಿದು ಪುನೀತ್ ಅವರೇ ಟ್ವಿಟ್ಟರ್ ಪ್ರವೇಶಿಸಿದ್ದರು. ಪುನೀತ್ ಯಾರನ್ನೂ ಫಾಲೋ ಮಾಡುತ್ತಿಲ್ಲ. ಆದರೆ ಅವರನ್ನು 1.10 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.