ಬೆಂಗಳೂರು: ಟ್ವಿಟ್ಟರ್ (Twitter) ವಿರುದ್ಧದ ಜಟಾಪಟಿಯಲ್ಲಿ ಕೇಂದ್ರ ಸರ್ಕಾರಕ್ಕೆ (Indian Government) ಗೆಲುವು ಸಿಕ್ಕಿದೆ. ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಟ್ವಿಟ್ಟರ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ವಜಾಗೊಳಿಸಿ 50 ಲಕ್ಷ ರೂ. ದಂಡ ವಿಧಿಸಿದೆ.
45 ದಿನಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಟ್ವಿಟ್ಟರ್ ದಂಡದ ಮೊತ್ತವನ್ನು ಪಾವತಿಸಬೇಕು ನ್ಯಾ. ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಆದೇಶಿಸಿದೆ. ಒಂದು ವೇಳೆ ಪಾಲಿಸಲು ವಿಫಲವಾದರೆ 45 ದಿನಗಳ ಬಳಿಕ ಪ್ರತಿದಿನ ಹೆಚ್ಚುವರಿಯಾಗಿ 5 ಸಾವಿರ ರೂ. ಪಾವತಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
Advertisement
ಎಲ್ಲಾ ಪ್ಲಾಟ್ಫಾರ್ಮ್ ಗಳು ಭಾರತೀಯ ಕಾನೂನಿಗೆ ಬದ್ಧವಾಗಿರಬೇಕು ಎಂಬ ನಿಯಮ ಇದೆ, ಆದರೇ @twitter ನ @jack ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ @Goi_MeitY ರವರು ನೀಡಿದ ನೋಟೀಸ್ ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನ ತೀರ್ಪು ಈ ಕೆಳಗಿನಂತಿದೆ.
✅ಐಟಿ ಕಾಯಿದೆ 2000 ರ @GoI_MeitY u/s.69(A) ನಿಂದ ತನಗೆ…
— Rajeev Chandrasekhar ???????? (@Rajeev_GoI) June 30, 2023
Advertisement
ನಿಮಗೆ ನೋಟಿಸ್ ನೀಡಲಾಗಿತ್ತು. ಆದರೆ ನೀವು ಸರಿಯಾಗಿ ಪಾಲಿಸಲಿಲ್ಲ. ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೇ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅನಿಯಮಿತ ದಂಡವನ್ನು ವಿಧಿಸಲಾಗುತ್ತದೆ. ನೀವು ನಿಯಮಾನುಸಾರಗಳನ್ನು ಪಾಲಿಸದೇ ಇರುವುದಕ್ಕೆ ಹಾಗೂ ವಿಳಂಬಗೊಳಿಸಿದ್ದಕ್ಕೆ ಯಾವುದೇ ಸ್ಪಷ್ಟ ಕಾರಣಗಳನ್ನು ತಿಳಿಸಿಲ್ಲ. ಈಗಾಗಲೇ ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾಗಿದೆ. ಆದರೇ ಈಗ ಇದ್ದಕ್ಕಿದ್ದಂತೆ ಪಾಲಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಬಂದಿದ್ದೀರಿ. ನೀವು ರೈತರಲ್ಲ ನೀವು ಮಿಲಿಯನ್ ಡಾಲರ್ ಕಂಪನಿಯ ಮಾಲೀಕರು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ಟ್ವಿಟ್ಟರ್ ಕಾನೂನು ಪಾಲನೆ ಮಾಡದೇ ನಿರಂತರ ಉಲ್ಲಂಘನೆ ಮಾಡುತ್ತಿತ್ತು: ರಾಜೀವ್ ಚಂದ್ರಶೇಖರ್
Advertisement
2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ನಿರ್ದೇಶಿಸಿತ್ತು. ಒಟ್ಟು 1,474 ಖಾತೆಗಳು ಮತ್ತು 175 ಟ್ವೀಟ್‌ಗಳ ಪೈಕಿ 39 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿರುವ ಆದೇಶವನ್ನು ಮಾತ್ರ ಟ್ವಿಟ್ಟರ್ ಹೈಕೋರ್ಟ್ ಅರ್ಜಿಯಲ್ಲಿ ಪ್ರಶ್ನಿಸಿತ್ತು. ಸುದೀರ್ಘ ವಿಚಾರಣೆ ನಡಿಸಿದ್ದ ಹೈಕೋರ್ಟ್ ಏಪ್ರಿಲ್ 21ರಂದು ಕೊನೆಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.
Advertisement
ಏನಿದು ಪ್ರಕರಣ?
ಸ್ವತಂತ್ರ ಸಿಖ್ ದೇಶವನ್ನು ಬೆಂಬಲಿಸುವ ಖಾತೆಗಳು, ರೈತರ ಪ್ರತಿಭಟನೆ ಕುರಿತಾಗಿ ಸುಳ್ಳು ಮಾಹಿತಿ ಹರಡುವ ಪೋಸ್ಟ್‌ಗಳು ಹಾಗೂ ಕೋವಿಡ್ 19 ಸಾಂಕ್ರಾಮಿಕವನ್ನು ಸರ್ಕಾರ ನಿರ್ವಹಣೆ ಮಾಡಿರುವ ರೀತಿಯನ್ನು ಟೀಕಿಸುವ ಟ್ವೀಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ 2021-22ರ ಅವಧಿಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟ್ಟರ್‌ಗೆ ಆದೇಶಿಸಿತ್ತು.
ಈ ಸಂದರ್ಭದಲ್ಲಿ ಟ್ವಿಟ್ಟರ್ ಆಡಳಿತವನ್ನು ಜಾಕ್ ಡಾರ್ಸಿ ನೇತೃತ್ವದ ತಂಡ ನೋಡಿಕೊಳ್ಳುತ್ತಿತ್ತು. ಐಟಿ ಸಚಿವಾಲಯದ ಆದೇಶಕ್ಕೆ ಟ್ವಿಟ್ಟರ್ ಕಂಪನಿ ಸರಿಯಾಗಿ ಸ್ಪಂದನೆ ನೀಡಿರಲಿಲ್ಲ. ಈ ಕಾರಣಕ್ಕೆ ನಮ್ಮ ಆದೇಶಗಳನ್ನು ಸರಿಯಾಗಿ ಪಾಲಿಸದೆ ಇದ್ದರೆ ಕ್ರಿಮಿನಲ್ ಪ್ರಕ್ರಿಯೆ ಎದುರಿಸಬೇಕಾಗುತ್ತದೆ. ಯಾವುದೇ ಕಂಪನಿ ಭಾರತದಲ್ಲಿ ಕಾರ್ಯನಿರ್ವಹಿಸುವಾಗ ನಮ್ಮ ದೇಶದ ಕಾನೂನನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿತ್ತು.
ದೇಶದಲ್ಲಿ 2.4 ಕೋಟಿ ಟ್ವಿಟ್ಟರ್ ಬಳಕೆದಾರರಿದ್ದಾರೆ. ಕೆಲವು ರಾಜಕೀಯ ವಿಷಯಗಳು ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳಿಂದ ಪೋಸ್ಟ್ ಆಗಿರುವುದಕ್ಕೆ ಸಂಬಂಧಿಸಿವೆ. ಇವುಗಳನ್ನು ಬ್ಲಾಕ್ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಉಲ್ಲಂಘಿಸಿದಂತೆ ಆಗುತ್ತದೆ. ಭಾರತದ ಐಟಿ ಕಾಯ್ದೆಯ ಪ್ರಕ್ರಿಯಾ ಅಗತ್ಯಗಳಿಗೆ ಒಳಪಡದ ಕಾರಣ ಕೆಲವು ಆದೇಶಗಳು ನ್ಯಾಯಾಂಗದ ಪರಾಮರ್ಶೆಗೆ ಒಳಪಡಬೇಕು ಎಂದು ಹೇಳಿ ಹೈಕೋರ್ಟ್ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿತ್ತು.
ರೈತರ ಹೋರಾಟದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ 1,300 ಟ್ವಿಟ್ಟರ್ ಖಾತೆಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಸೂಚಿಸಿತ್ತು. ಹೀಗಿದ್ದರೂ ಟ್ವಿಟ್ಟರ್ 500 ಖಾತೆಗಳನ್ನು ಮಾತ್ರ ಭಾರತದಲ್ಲಿ ನಿರ್ಬಂಧ ಹೇರಿತ್ತು. ಭಾರತ ಸರ್ಕಾರದ ಆದೇಶವನ್ನು ಟ್ವಿಟ್ಟರ್ ಪಾಲಿಸದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.
Web Stories