ನವದೆಹಲಿ: ಕಾನೂನಾತ್ಮಕ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ (Pakistan) ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯನ್ನು (Twitter Account) ಭಾರತದಲ್ಲಿ (India) ವೀಕ್ಷಿಸದಂತೆ ನಿರ್ಬಂಧಿಸಲಾಗಿದೆ.
ಕಂಪನಿಯ ಮಾರ್ಗಸೂಚಿಗಳು ನ್ಯಾಯಾಲಯದ ಆದೇಶದಂತಹ ಮಾನ್ಯ ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ @GovtofPakistan ಖಾತೆಯನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಟ್ವಿಟ್ಟರ್ (Twitter) ಗುರುವಾರ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ನಲ್ಲಿ ಸೂಚನೆ ನೀಡಿದೆ.
Advertisement
Advertisement
ಪಾಕಿಸ್ತಾನದ ಟ್ವಿಟರ್ ಖಾತೆಯನ್ನು ಭಾರತದಲ್ಲಿ ವೀಕ್ಷಿಸಲು ನಿರ್ಬಂಧಿಸಿರುವುದು ಇದು 3ನೇ ಬಾರಿಯ ವರದಿಯಾಗಿದೆ. ಇದಕ್ಕೂ ಮೊದಲು 2022ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಇದು 2ನೇ ವರದಿಯಾಗಿದೆ. ಅದಕ್ಕೂ ಮುನ್ನ ಜುಲೈನಲ್ಲಿಯೂ ತಡೆಹಿಡಿಯಲಾಗಿತ್ತು. ಬಳಿಕ ಅನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್
Advertisement
Advertisement
ಕಳೆದ ವರ್ಷ ಜೂನ್‌ನಲ್ಲಿ ಭಾರತದಲ್ಲಿ ಟ್ವಿಟರ್ ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಅಧಿಕೃತ ಖಾತೆಗಳನ್ನು ನಿಷೇಧಿಸಿತ್ತು. ಆಗಸ್ಟ್‌ನಲ್ಲಿ ಭಾರತವು 8 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಅದರಲ್ಲಿ ಒಂದು ಪಾಕಿಸ್ತಾನದ್ದಾಗಿದೆ. ಮಾತ್ರವಲ್ಲದೇ ನಕಲಿ ಹಾಗೂ ಭಾರತ ವಿರೋಧಿ ವಿಷಯಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಒಂದು ಫೇಸ್‌ಬುಕ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದಿನ 5 ದಿನ ಮಳೆ ಸಾಧ್ಯತೆ