ವಾಷಿಂಗ್‌ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಜೀವ ಬೆದರಿಕೆ ಒಡ್ಡಿರುವ ವೀಡಿಯೋ ರೆಕಾರ್ಡ್ ಪೋಸ್ಟ್ ಹಾಕಿದ್ದಕ್ಕೆ ಇರಾನ್ ಮುಖ್ಯ ನಾಯಕನಿಗೆ ಸಂಬಂಧಿಸಿದ ಟ್ವಿಟ್ಟರ್ ಖಾತೆಯನ್ನು ನಿಷೇಧಿಸಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.
ಎರಡು ವರ್ಷಗಳ ಹಿಂದೆ ಬಾಗ್ದಾದ್‌ನಲ್ಲಿ ಡೊನಾಲ್ಡ್ ಟ್ರಂಪ್ ಡ್ರೋನ್ ದಾಳಿಗೆ ಆದೇಶಿಸಿದ್ದರು. ಈ ವೇಳೆ ಇರಾನ್‌ನ ಉನ್ನತ ಕಮಾಂಡರ್ ಜನರಲ್ ಖಾಸಿಂ ಸೊಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂಬಂತೆ ಮಾನವರಹಿತ ವಿಮಾನವನ್ನು ತೋರಿಸುವ ಆ್ಯನಿಮೇಟೆಡ್ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಖಮೇನಿ ಸೇಟ್ ಎಂಬವರ ಖಾತೆಯಿಂದ ಪೋಸ್ಟ್ ಆಗಿದೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್ ಸಿಎಂ ಮನವಿ ಪತ್ರ
Advertisement
Advertisement
ಇರಾನ್ ಮುಖ್ಯ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಖಾತೆಗಳು ವಿವಿಧ ಭಾಷೆಗಳಲ್ಲಿ ಸಕ್ರಿಯವಾಗಿವೆ. ಕಳೆದ ವರ್ಷವೂ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪೋಸ್ಟ್ ಹಾಕಿದ್ದಕ್ಕಾಗಿ ಟ್ವಿಟ್ಟರ್‌ನಿಂದ ಇದೇ ರೀತಿ ಒಂದು ಖಾತೆಯನ್ನು ಅಮಾನತು ಮಾಡಲಾಗಿತ್ತು.
Advertisement
ಖಮೇನಿ ಅಧಿಕೃತ ಖಾತೆಯಲ್ಲಿ ʻಸೇಡು ತೀರಿಸಿಕೊಳ್ಳುವುದು ನಿಶ್ಚಿತʼ ಎಂಬ ಸಾಲಿನೊಂದಿಗೆ ವೀಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ. ಇದನ್ನೂ ಓದಿ: ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?
Advertisement
ಜನರನ್ನು ಸುರಕ್ಷಿತವಾಗಿರಿಸುವುದು ಮತ್ತು ಆರೋಗ್ಯಕರ ಸಂವಹನಕ್ಕೆ ವೇದಿಕೆ ಕಲ್ಪಿಸುವುದೇ ಕಂಪೆನಿಯ ಮುಖ್ಯ ಉದ್ದೇಶ. ನಿಂದನೀಯ ನಡೆವಳಿಕೆಯ ವಿರುದ್ಧ ಸ್ಪಷ್ಟ ನೀತಿಗಳನ್ನು ರೂಪಿಸಲಾಗಿದೆ. ನಿಯಮ ಉಲ್ಲಂಘನೆಯಾದಲ್ಲಿ ಗುರುತಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.
ಇರಾನ್ ರೆವಲ್ಯೂಷನರಿ ಗಾರ್ಡ್ಸ್‌ನ ವಿದೇಶಿ ಕಾರ್ಯಾಚರಣೆಯ ಅಂಗವಾದ ಕುಡ್ಸ್ ಫೋರ್ಸ್‌ನ ಮುಖ್ಯಸ್ಥನಾಗಿದ್ದ ಸೊಲೈಮನಿ, ಮಧ್ಯಪ್ರಾಚ್ಯದ ಕಾರ್ಯತಂತ್ರಗಳ ವಾಸ್ತುಶಿಲ್ಪಿಯಾಗಿದ್ದ. 2020ರ ಜನವರಿ 3ರಂದು ಬಾಗ್ದಾದ್‌ನ ವಿಮಾನ ನಿಲ್ದಾಣದ ಹೊರಗೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಸೊಲೈಮನಿ ಹತ್ಯೆಯಾಗಿದ್ದ. ಸೊಲೈಮನಿ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಬಿಗುವಿನ ವಾತಾವರಣ ಉಂಟಾಗಿದೆ. ಇದು ಮಧ್ಯಪ್ರಾಚ್ಯದಲ್ಲಿ ಉದ್ಯೋಗ, ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಲಿ ಎನ್ನಲಾಗಿತ್ತು.