ಟ್ವಿಟ್ಟರ್‌ಗೆ ನಿಷೇಧ ಹೇರಿದ ಪಾಕ್‌ ಸರ್ಕಾರ

Public TV
1 Min Read
x twitter MUSK

ಇಸ್ಲಾಮಾಬಾದ್‌: ಪಾಕಿಸ್ತಾನ ಸರ್ಕಾರ (Pakistan Government) ಎಲಾನ್‌ ಮಸ್ಕ್‌ (Elon Musk) ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್‌(ಟ್ವಿಟ್ಟರ್‌) ಅನ್ನು ನಿಷೇಧಿಸಿದೆ.

ಪಾಕಿಸ್ತಾನದ ಆಂತರಿಕ ಸಚಿವಾಲಯವು ದೇಶದ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಎಕ್ಸ್‌ (X) ವಿಫಲವಾಗಿದೆ ಮತ್ತು ಮೈಕ್ರೋಬ್ಲಾಗಿಂಗ್ ಸೈಟ್‌ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ನಿಷೇಧ ನಿರ್ಧಾರವನ್ನು ಕೈಗೊಂಡಿದೆ. ಇದನ್ನೂ ಓದಿ: ಸುರೇಶ್‌ಗೆ ವೋಟ್ ಹಾಕಿಲ್ಲ ಅಂದ್ರೆ ಹಕ್ಕು ಪತ್ರ ನೀಡಲ್ಲ: ಡಿಕೆಶಿಯಿಂದ ಬೆದರಿಕೆ, ಬಿಜೆಪಿ ಕಿಡಿ

Shehbaz Sharif

ಪಾಕಿಸ್ತಾನದಲ್ಲಿ ಎಕ್ಸ್‌ ನೋಂದಣಿಯಾಗಿಲ್ಲ ಅಥವಾ ಸ್ಥಳೀಯ ಕಾನೂನುಗಳಿಗೆ (Law) ಬದ್ಧವಾಗಿರಲು ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಲ್ಲ ಎಂದು ಸಿಂಧ್‌ ಹೈಕೋರ್ಟ್‌ಗೆ (Sindh High Court) ತಿಳಿಸಿದೆ.

ದೇಶದ ಭದ್ರತೆಯ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಹಲವು ದೇಶಗಳು ಎಕ್ಸ್‌ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದವು ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಒಂದು ವಾರದ ಒಳಗಡೆ ಎಕ್ಸ್‌ ಮೇಲಿನ ನಿರ್ಬಂಧವನ್ನು ತೆಗೆಯಬೇಕೆಂದು ಆದೇಶಿಸಿದೆ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದ ಗುಲಾಂ ನಬಿ ಆಜಾದ್!

ಪಾಕ್‌ ಇಲ್ಲಿಯವರೆಗೆ ಅಧಿಕೃತವಾಗಿ ಎಕ್ಸ್‌ ಅನ್ನು ನಿಷೇಧ ಮಾಡಿರುವುದಾಗಿ ತಿಳಿಸಿಲ್ಲ. ಆದರೆ ಕಳೆದ ಫೆಬ್ರವರಿ 17 ರಿಂದ ಪಾಕ್‌ ಜನತೆ ಎಕ್ಸ್‌ ಅನ್ನು ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.

 

Share This Article