ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಟೂರ್ನಿಯ ಕೊನೆಯ ಪಂದ್ಯದ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅಂಪೈರ್ ಬಳಿಯಿಂದ ಬಾಲ್ ಪಡೆದಿದ್ದು, ಧೋನಿ ಅವರ ಈ ನಡೆಗೆ ಅಭಿಮಾನಿಗಳು ವ್ಯಕ್ತ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಲೀಡ್ಸ್ ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಏಕದಿನ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾರತ 8 ವಿಕೆಟ್ ಸೋಲುಂಡು ಸರಣಿಯನ್ನು 2-1 ಅಂತರದಲ್ಲಿ ಕಳೆದುಕೊಂಡಿತ್ತು. ಪಂದ್ಯ ಮುಕ್ತಾಯದ ಬಳಿಕ ಧೋನಿ ಅಂಪೈರ್ ಬಳಿ ತೆರಳಿ ಬಾಲ್ ಪಡೆದು ಪೆವಿಲಿಯನ್ ಗೆ ಮರಳಿದ್ದರು. ಸದ್ಯ ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ವೀಕ್ಷಿಸಿದ ಹಲವು ಅಭಿಮಾನಿಗಳು ಧೋನಿ ನಡೆಯ ಬಗ್ಗೆ ತಮ್ಮದೇ ಆಭಿಪ್ರಾಯ ತಿಳಿಸಿ ಮರು ಟ್ವೀಟ್ ಮಾಡಿದ್ದಾರೆ.
Advertisement
https://twitter.com/KSKishore537/status/1019298145447174146?
Advertisement
ಕೆಲ ಅಭಿಮಾನಿಗಳು ತಮ್ಮ ಟ್ವೀಟ್‍ನಲ್ಲಿ ಧೋನಿ ಅಂಪೈರ್ ಬಳಿ ಬಾಲ್ ಪಡೆದಿದ್ದರ ಕುರಿತು ಪ್ರಶ್ನಾರ್ಥಕವಾಗಿ ಕಂಡರೆ, ಕೆಲವರು ಧೋನಿ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದರಾ ಎಂದು ಹೇಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದರು, ಅಲ್ಲದೇ ಅಂತಿಮ ಪಂದ್ಯದಲ್ಲೂ 66 ಎಸೆತಗಳಲ್ಲಿ 42 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.
Advertisement
ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕಕತ್ವ ವಹಿಸಿದ ಬಳಿಕ ಮೊದಲ ಬಾರಿಗೆ ಏಕದಿನ ಟೂರ್ನಿಯಲ್ಲಿ ತಂಡ ಸೋಲುಂಡಿದೆ. ಇದರೊಂದಿಗೆ ಟೀಂ ಇಂಡಿಯಾ ಸತತ 9 ಗೆಲುವಿನ ನಾಗಾಲೋಟಕ್ಕೆ ಇಂಗ್ಲೆಂಡ್ ಬ್ರೇಕ್ ಹಾಕಿದೆ.
Advertisement
Big Question is Why MS Dhoni took the ball from umpires at the end of match ? pic.twitter.com/21lgRGNyl4
— DHONI Trends™ (@TrendsDhoni) July 17, 2018
Plzz Don't do this again @msdhoni ???????? pic.twitter.com/T2nitmxOAc
— A∂ιtүα (@Aditya__17) July 17, 2018
I am scared now….it is not the time for DHONI to retire …please Dhoni …stay …
Dont make any announcement …please please …it will be end of my Childhood …
— Abhishek dwivedi (@abhishek_srkfan) July 17, 2018
Retierment announcement comming soon! ????Asia cup would be the last get go i think
— rohit (@rv0005) July 17, 2018