ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

Public TV
1 Min Read
Shivamogga Communal Riots

ಶಿವಮೊಗ್ಗ: ಜಿಲ್ಲೆಯ ರಾಗಿಗುಡ್ಡದಲ್ಲಿ (Ragigudda) ಕಳೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ನಡೆದ ಕೋಮು ಗಲಭೆಗೆ (Communal Riots) ಸಾಕಷ್ಟು ಟ್ವಿಸ್ಟ್ ಸಿಗುತ್ತಿದೆ.

ಈದ್ ಮಿಲಾದ್ ಮೆರವಣಿಗೆಯ ವೇಳೆ ರಾಗಿಗುಡ್ಡದ ಮುಖ್ಯ ರಸ್ತೆಯಲ್ಲಿರುವ ಶನೇಶ್ವರ ದೇವಾಲಯದ ಹತ್ತಿರ ಗಲಭೆ ಶುರುವಾಗಿತ್ತು. ಕಲ್ಲು ತೂರಾಟ (Stone Pelting) ನಡೆಸಿ ಬರಬ್ಬೋರಿ 7ಕ್ಕೂ ಹೆಚ್ಚು ಮನೆಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಆದರೆ ಈ ಗಲಭೆಗೆ ಮುನ್ನ ಎರಡು ಓಮ್ನಿ ಕಾರಿನಲ್ಲಿ ಬಂದ 15ಕ್ಕೂ ಹೆಚ್ಚು ಯುವಕರ ತಂಡ ಈ ಗಲಭೆ ಮಾಡಿದೆ. ಆ ಕಾರು ಕೆಎ 20 ನೋಂದಣಿಯ ಗಾಡಿಗಳಾಗಿದ್ದು, ಅವುಗಳಲ್ಲಿ ಮಂಗಳೂರು (Mangaluru) ಇಲ್ಲ ಉಡುಪಿ (Udupi) ಜಿಲ್ಲೆಗಳಿಂದ ಕಿಡಿಗೇಡಿಗಳು ಬಂದು ಪ್ರೀ ಪ್ಲಾನ್ ಮಾಡಿಕೊಂಡು ಗಲಭೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

ಕಿಡಿಗೇಡಿಗಳ ಚಲನವಲನಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅಲ್ಲದೇ ಪೊಲೀಸರು ಕೂಡ ಉತ್ತರ ಪ್ರದೇಶದ ನಂಬರ್ ಪ್ಲೇಟ್ ಇರುವ ಕಾರನ್ನು ವಶಕ್ಕೆ ಪಡೆದಿದ್ದು, ಈ ಕಾರು ಕೂಡ ಗಲಭೆಗೆ ಬಳಸಲಾಗಿದೆ ಎನ್ನಲಾಗುತ್ತಿದೆ. ಇದರಿಂದ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರೀ ಪ್ಲಾನ್ಡ್ ಆಗಿ ನಡೆದಿದ್ದು ಎನ್ನುವ ಸಂಶಯ ಮೂಡಿದ್ದು, ಗಲಭೆ ಸ್ಥಳಕ್ಕೆ ಬಂದ ಓಮ್ನಿಗಳ ಜಾಡು ಹಿಡಿದು ಪೊಲೀಸರು ಹೊರಟಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರೂ ಕೂಡ ಇದೊಂದು ಪ್ರೀ ಪ್ಲಾನ್‌ ಗಲಭೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article