ಬೆಂಗಳೂರು: ಪಿಡಿಓ ಶೃತಿಗೌಡ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಶೃತಿಗೌಡಗೆ ಅಮಿತ್ ಜೊತೆಗೆ ನಂಟು ಇತ್ತು ಅನ್ನೋದನ್ನ ಚಾರ್ಜ್‍ಶೀಟ್ ಬಯಲು ಮಾಡಿದೆ. ಜೊತೆಗೆ ಮತ್ತಷ್ಟು ಭಯಾನಕ, ರೋಚಕ ಸತ್ಯಗಳು ಚಾರ್ಜ್‍ಶೀಟ್‍ನಲ್ಲಿ ಬಯಲಾಗಿದೆ.
Advertisement
2017ರ ಜನವರಿ 13 ರಂದು ಬೆಂಗಳೂರಿನ ಹೆಸರಘಟ್ಟದ ಆಚಾರ್ಯ ಕಾಲೇಜು ಬಳಿ ಪಿಡಿಓ ಶೃತಿಯ ಪತಿ ಹಾಗೂ ಮಾವ, ಅಮಿತ್ ಎಂಬಾತನನ್ನ ಶೂಟೌಟ್ ಮಾಡಿ ಕೊಲೆ ಮಾಡಿದ್ರು. ಅದಾದ ಕೆಲವೇ ನಿಮಿಷಗಳಲ್ಲಿ ಶೃತಿಗೌಡ ಆತ್ಮಹತ್ಯೆಗೆ ಶರಣಾಗಿದ್ರು. ಈ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
Advertisement
Advertisement
ಫೇಸ್‍ಬುಕ್, ಮೆಸೆಂಜರ್‍ಗಳಲ್ಲಿ ಶೃತಿ-ಅಮಿತ್ ಗೆಳೆತನದ ಬಗ್ಗೆ ಆಗಸ್ಟ್ 2016ರಲ್ಲಿ ಅಮಿತ್ ಪತ್ನಿಗೆ ಗೊತ್ತಾಗಿತ್ತು. ನಿಮ್ಮ ಪತ್ನಿಯ ನಡತೆ ಸರಿ ಇಲ್ಲ ಎಂದು ಶೃತಿಗೌಡ ಪತಿ ರಾಜೇಶ್‍ಗೆ ಅಮಿತ್ ಪತ್ನಿ ಎಚ್ಚರಿಸಿದ್ರು. ನೀವು ಶೃತಿಯವರಿಗೆ ಎಚ್ಚರಿಕೆ ನೀಡಿ, ನಾನು ಅಮಿತ್‍ಗೆ ಎಚ್ಚರಿಕೆ ನೀಡ್ತೀನಿ ಅಂತ ರಂಜಿತಾ ಹೇಳಿದ್ರು. ಇದು ಗೊತ್ತಾಗಿ ರಾಜೇಶ್ ಶೃತಿಗೆ ಹೊಡೆದು ಮನೆಯಲ್ಲೇ ಕೂಡಿ ಹಾಕಿದ್ದ. ಈ ಬಗ್ಗೆ ಶೃತಿ ತನ್ನ ಪೋಷಕರ ಬಳಿ ನೋವು ತೋಡಿಕೊಂಡಿದ್ದು, ಅನುಮಾನ ಬೇಡ ಎಂದು ಶೃತಿ ಪೋಷಕರು ರಾಜೇಶ್‍ಗೆ ಹೇಳಿದ್ರು.
Advertisement
ಸಂಸಾರದ ಎಲ್ಲಾ ನಿರ್ವಹಣೆ ಹೊಣೆ ಶೃತಿಯೇ ನೋಡಿಕೊಳ್ಳುತ್ತಿದ್ದರು. 2011ರಲ್ಲಿ 2ನೇ ಮಗುವೂ ಹೆಣ್ಣಾಗಿದ್ದಕ್ಕೆ ರಾಜೇಶ್ ಪತ್ನಿಗೆ ಮಾನಸಿಕ ಹಿಂಸೆ ನೀಡ್ತಿದ್ದ. ತವರುಮನೆಗೆ ಹೋಗಿ ಆಸ್ತಿ ಸಮ ಭಾಗ ಮಾಡಿಸು ಎಂದು ರಾಜೇಶ್ ಜಗಳ ಮಾಡ್ತಿದ್ದ. ರಾಜೇಶ್ ಯಾವುದೇ ಕೆಲಸಕ್ಕೆ ಹೋಗದೇ ಶೃತಿ ಸಂಪಾದನೆಯಲ್ಲಿ ಜೀವನ ನಡೆಸ್ತಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರಿಂದ ಕೋರ್ಟ್‍ಗೆ 300 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಪೊಲೀಸರು 47 ಮಂದಿ ಸಾಕ್ಷಿಗಳ ಹೇಳಿಕೆಯನ್ನ ದಾಖಲಿಸಿದ್ದಾರೆ. ರಾಜೇಶ್ ತನ್ನ ಹೆಂಡತಿ ಶೀಲದ ಮೇಲೆ ಅನುಮಾನ ಪಟ್ಟು ಶೃತಿಗೌಡ ಕಾರ್‍ಗೆ ಜಿಪಿಎಸ್ ಅಳವಡಿಸಿದ್ದ. ಜ.13ರಂದು ಶೃತಿ ಕಾರ್ ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜ್ ಬಳಿ ನಿಂತಿತ್ತು. ಶೃತಿ ಗಂಡ ರಾಜೇಶ್ ಮತ್ತು ಮಾವ ಗೋಪಾಲಕೃಷ್ಣ ಕಾರ್ ಬಳಿ ಬಂದಿದ್ರು. ಗನ್ ತೆಗೆದು ರಾಜೇಶ್ ಶೃತಿ ಜೊತೆ ಮಾತಾಡ್ತಿದ್ದ ಅಮಿತ್ ಎದೆಗೆ ಗುಂಡು ಹಾರಿಸಿದ್ದ ಎಂದು ಚಾರ್ಜ್‍ಶೀಟ್‍ನಲ್ಲಿ ಇಂಚಿಂಚು ಮಾಹಿತಿ ಉಲ್ಲೇಖವಾಗಿದೆ.
ಇದೇ ವರ್ಷ ಸಂಕ್ರಾಂತಿ ಹಬ್ಬದಂದು ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಪಿಡಿಓ ಶೃತಿಗೌಡ ಕೇಸ್‍ನಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಈಗ ಅಮಿತ್ ಬದುಕಿಲ್ಲ, ರಾಜೇಶ್ ಜೈಲು ಸೇರಿದ್ದಾನೆ.