ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ರಮೇಶ್ ಕುಟುಂಬಸ್ಥರು, ಕೈನಾಯಕರು ದೂರಿದ್ದಾರೆ. ಆದರೆ ಐಟಿ ಅಧಿಕಾರಿಗಳು ನಾವು ರಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿಲ್ಲ. ಅಲ್ಲದೆ ಯಾವುದೇ ಹೇಳಿಕೆಯನ್ನೂ ಪಡೆದಿಲ್ಲ. ದಾಳಿ ವೇಳೆ ಪರಮೇಶ್ವರ್ ನಿವಾಸದಲ್ಲೇ ಇದ್ದ ರಮೇಶ್ ಹೇಳಿಕೆಯನ್ನ ಪಂಚನಾಮೆಗಾಗಿ ಪಡೆಯಲಾಗಿದೆಯಷ್ಟೇ ಅಂತ ಸ್ಪಷ್ಟಪಡಿಸಿದ್ದಾರೆ. ಆದರೆ ಐಟಿ ಅಧಿಕಾರಿಗಳು, ಉಲ್ಲಾಳದಲ್ಲಿರುವ ರಮೇಶ್ ಮನೆಗೆ ಹೋಗಿ ಬಂದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಹೌದು. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಪರಮೇಶ್ವರ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ಶನಿವಾರ ನಸುಕಿನ ಜಾವ 3.30ರ ಸುಮಾರಿಗೆ ಎಲ್ಲಾ ಅಂತ್ಯಗೊಳಿಸಿ ಐಟಿ ಅಧಿಕಾರಿಗಳು ವಾಪಸ್ ಆಗಿದ್ದರು. ಈ ವೇಳೆ ರಮೇಶ್ ಕೂಡ ಪರಮೇಶ್ವರ್ ಜೊತೆಯೇ ಇದ್ದರು. ಐಟಿ ರೇಡ್ ನೋಡಿದ್ದ ರಮೇಶ್ ತುಂಬಾ ಹೆದರಿದ್ದರು. ಇದನ್ನ ತಮ್ಮ ಸಾಹೇಬ್ರು ಪರಮೇಶ್ವರ್ ಬಳಿಯೂ ಹಂಚಿಕೊಂಡಿದ್ದರು. ಆಗ ಪರಮೇಶ್ವರ್, ರಮೇಶ್‍ಗೆ ಧೈರ್ಯ ಹೇಳಿ, ಈಗ ಇಲ್ಲೇ ಮಲಗು ಬೆಳಗ್ಗೆ ಮನೆಗೆ ಹೋಗು ಅಂದಿದ್ದರು. ಇದನ್ನೂ ಓದಿ: ಪರಂ ಪಿಎ ಸೂಸೈಡ್ ಪ್ರಕರಣ – ಇಂದು ರಾಮನಗರದ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ
Advertisement
ಸಾಹೇಬ್ರ ಮಾತಿನಂತೆ ಬೆಳಗ್ಗೆ 6 ಗಂಟೆಗೆ ಹೊರಟ ರಮೇಶ್ ಆತ್ಮಹತ್ಯೆಗೆ ನಿರ್ಧಾರ ಮಾಡಿದಂತಿತ್ತು. ಹೀಗಾಗಿ ತಮ್ಮ ಉಲ್ಲಾಳ ನಿವಾಸಕ್ಕೆ ಬಂದು ಕುಟುಂಬಸ್ಥರ ಜೊತೆ 2 ತಾಸು ಕಳೆದು, ತಿಂಡಿ ತಿಂದು 9 ಗಂಟೆ 7 ನಿಮಿಷಕ್ಕೆ ಸರಿಯಾಗಿ ಮನೆಯಿಂದ ಹೊರಬಂದಿದ್ದರು. ಈ ವೇಳೆ ಮನೆಯವರಿಗೆಲ್ಲ ಟಾಟಾ ಮಾಡಿದ್ದರು. ವಿದಾಯದ ಅರಿವಿಲ್ಲದ ಕುಟುಂಬಸ್ಥರು ರಮೇಶ್ ನನ್ನ ಸಂತೋಷದಿಂದಲೇ ಕಳುಹಿಸಿಕೊಟ್ಟರು. ಅಲ್ಲಿಂದ ರಮೇಶ್ ನೇರವಾಗಿ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‍ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪರಮೇಶ್ವರ್ ಆಪ್ತ ರಮೇಶ್ ಐಟಿಗೆ ಬೆದರಿದ್ರಾ? ಕೊನೆ ಕ್ಷಣ ಹೇಗಿತ್ತು?
Advertisement
Advertisement
ಐಟಿ ಅಧಿಕಾರಿಗಳು ನಾವು ರಮೇಶ್ ಮನೆ ಮೇಲೆ ದಾಳಿಯೇ ನಡೆಸಿಲ್ಲ ಎಂದು ಹೇಳಿದ್ದಾರೆ. ಆದರೆ ಅ.10ರಂದು ಮಧ್ಯಾಹ್ನ 1.15ರ ಸುಮಾರಿಗೆ ಐಟಿ ಅಧಿಕಾರಿಗಳು ರಮೇಶ್ ಅವರ ಉಲ್ಲಾಳ ನಿವಾಸಕ್ಕೆ ಬಂದು ಕೆಲವೊಂದು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ. ಅಲ್ಲದೇ ರಮೇಶ್ ಪಂಚಾನಾಮೆ ಮಾಡಿ ಹವಾಲಾ ಬಗ್ಗೆ, ಮೆಡಿಕಲ್ ಸೀಟ್‍ಗಳು ಎಷ್ಟಕ್ಕೆ ಮಾರಾಟವಾಗಿದೆ ಅಂತೆಲ್ಲಾ ಪ್ರಶ್ನೆ ಮಾಡಿ ಬೆದರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೆಲ್ಲಾ ನೋಡಿದ ರಮೇಶ್ ಭಯಗೊಂಡಿದ್ದಾರೆ. ಇಂದು ನಮ್ಮನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಮುಂದಿನ ದಿನ ನನ್ನನ್ನೂ ಆರೋಪಿಯನ್ನಾಗಿ ಮಾಡಬಹುದು. ಇದರಿಂದ ನನ್ನ ಮಾನ ಹೋಗುತ್ತೆ ಅಂತ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ್ ಡೆತ್‍ನೋಟ್ ನಲ್ಲಿ ಪರೋಕ್ಷವಾಗಿ ಐಟಿ ಬೆದರಿಕೆಯನ್ನ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಐಟಿ ಇಲಾಖೆ ಸ್ಪಷ್ಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ
ಈ ನಡುವೆ, ಐಟಿ ಅಧಿಕಾರಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ರಮೇಶ್ ಸಹೋದರ ಸತೀಶ್ ದೂರು ಕೊಟ್ಟಿದ್ದಾರೆ. ಪೊಲೀಸರು ಸಿಆರ್‍ಪಿಸಿ ಸೆಕ್ಷನ್ 174ರ ಅಡಿ ಅಸಹಜ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ.
https://www.youtube.com/watch?v=U7jgbwAAatQ